ಕೆಫೇನ್ ಎಂದರೇನು? 
ಫೋಟೋ ಗ್ಯಾಲರಿ

ಕೆಫೇನ್ ಕಡುಬಯಕೆಯನ್ನು ನಿಯಂತ್ರಿಸಲು ಇಲ್ಲಿದೆ ಸುಲಭ ಮಾರ್ಗ! Caffeine Cravings

ಭಾನುಪ್ರಿಯ ಡಿ.ಕೆ

ಕೆಫೇನ್ ಎಂದರೇನು?

ಕೆಫೇನ್ ಎಂಬುದು ಪ್ರಪಂಚದಾದ್ಯಂತ ಅತ್ಯಂತ ಹೆಚ್ಚಾಗಿ ಬಳಕೆಯಾಗುವ ಒಂದು ನೈಸರ್ಗಿಕ ಉತ್ತೇಜಕವಾಗಿದೆ. ಇದು ಕಾಫಿ ಬೀಜಗಳು, ಚಹಾದ ಎಲೆಗಳು, ಕೋಕೋ ಬಿನ್ಸ್ ಮತ್ತು ಕೆಲವು ನಿರ್ದಿಷ್ಟ ಗಿಡಮೂಲಿಕೆಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ.

ಯಥೇಚ್ಛವಾಗಿ ನೀರು ಕುಡಿಯಿರಿ

ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಆಯಾಸ ಉಂಟಾಗಿ ಕಾಫಿ ಕುಡಿಯುವ ಹಂಬಲ ಮೂಡುತ್ತದೆ. ಕೆಫೇನ್ ಕ್ರೇವಿಂಗ್ಸ್ ಬಂದಾಗ ತಕ್ಷಣ ಒಂದು ದೊಡ್ಡ ಗ್ಲಾಸ್ ನೀರು ಕುಡಿಯುವುದರಿಂದ ಈ ಹಂಬಲ ತಕ್ಷಣವೇ ತಗ್ಗುತ್ತದೆ.

ಪೌಷ್ಟಿಕಾಂಶಯುಕ್ತ ಲಘು ಆಹಾರ

ರಕ್ತದಲ್ಲಿ ಸಕ್ಕರೆ ಮಟ್ಟ ಕುಸಿದಾಗ ದೇಹವು ಶಕ್ತಿಗಾಗಿ ಕೆಫೇನ್ ಬಯಸುತ್ತದೆ. ಆ ಸಮಯದಲ್ಲಿ ಕಾಫಿ ಬದಲಿಗೆ ಬಾದಾಮಿ, ವಾಲ್‌ನಟ್ಸ್, ಒಣದ್ರಾಕ್ಷಿ ಅಥವಾ ಯಾವುದಾದರೂ ಒಂದು ತಾಜಾ ಹಣ್ಣನ್ನು ಸೇವಿಸಿ.

ಗಾಢವಾದ ನಿದ್ರೆ ಮತ್ತು ವಿಶ್ರಾಂತಿ

ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗದಿದ್ದಾಗ ನೈಸರ್ಗಿಕವಾಗಿಯೇ ಆಲಸ್ಯ ಮೂಡುತ್ತದೆ. ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡುವುದರಿಂದ ಕಾಫಿ-ಟೀ ಮೇಲಿನ ಅವಲಂಬನೆ ತಾನಾಗಿಯೇ ಕಡಿಮೆಯಾಗುತ್ತದೆ.

ಗಮನ ಬದಲಾಯಿಸಿ

ಕೆಫೇನ್ ಬಯಕೆ ತೀವ್ರವಾದಾಗ ಕೇವಲ 5 ನಿಮಿಷಗಳ ಕಾಲ ಲಘು ನಡಿಗೆ ಮಾಡಿ, 10 ಬಾರಿ ದೀರ್ಘವಾಗಿ ಉಸಿರಾಡಿ ಅಥವಾ ಇಷ್ಟವಾದ ಸಂಗೀತ ಆಲಿಸುವ ಮೂಲಕ ನಿಮ್ಮ ಮನಸ್ಸನ್ನು ಬೇರೆಡೆಗೆ ಹರಿಸಿ.