ಬಂಜೆತನ
ಇಂದಿನ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾನಸಿಕ ಒತ್ತಡವು ದಂಪತಿಗಳ ಪಾಲಿಗೆ ಪೋಷಕತ್ವದ ಕನಸನ್ನು ನನಸಾಗಿಸಲು ಅಡ್ಡಿಯಾಗುತ್ತಿದೆ. ಅದರಲ್ಲೂ ಮಹಿಳೆಯರಲ್ಲಿಯೇ ಈ ಸಮಸ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.ತಡವಾಗಿ ಗರ್ಭಧಾರಣೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿಜೀವನದ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿ ತಡವಾಗಿ ಮದುವೆಯಾಗಿ ಮಗುವನ್ನು ಪಡೆಯಲು ದೀರ್ಘ ಸಮಯದವರೆಗೆ ವಿಳಂಬ ಮಾಡುತ್ತಾರೆ. ಈ ಕಾರಣದಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತದೆ.ಅಂಡಾಣುಗಳ ಕ್ಷೀಣತೆ
35 ವರ್ಷದ ನಂತರ ಅಂಡಾಣುಗಳ ಗುಣಮಟ್ಟ ಕ್ರಮೇಣವಾಗಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ನೀವೇನಾದರೂ ಮಗುವನ್ನು ಹೊಂದಲು ಬಯಸಿದರೆ, 35 ವರ್ಷಕ್ಕಿಂತ ಮುಂಚೆಯೇ ಮಗುವನ್ನು ಹೊಂದಲು ನಿರ್ಧರಿಸಿ. ಇದು ಬಂಜೆತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಾರ್ಮೋನ್ಗಳ ಕೊರತೆ
ಮಹಿಳೆಯರ ದೇಹದಲ್ಲಿ ಸಾಕಷ್ಟು ಆಂಟಿ-ಮುಲ್ಲೇರಿಯನ್ ಹಾರ್ಮೋನ್ಗಳ ಕೊರತೆ ಹೆಚ್ಚಾದಲ್ಲಿ ಅಂಡಾಶಯದ ಮೊಟ್ಟೆಗಳ ಸಂಖ್ಯೆಯಲ್ಲಿ ಇಳಿಕೆಗೆ ಕಂಡುಬರುತ್ತದೆ. ಇದು ಅನುವಂಶೀಯತೆ, ಕಳಪೆ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಕೂಡಾ ಆಧರಿಸಿರುತ್ತದೆ.ಹೆಚ್ಚಾದ ಬೊಜ್ಜು
ಬಂಜೆತನಕ್ಕೆ ಬೊಜ್ಜು ಕೂಡಾ ಒಂದು ಅಪಾಯಕಾರಿಯಾಗಿದೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅನೇಕ ಮಹಿಳೆಯರು ಈ ವಿಚಾರದ ಬಗ್ಗೆ ಗಮನಹರಿಸುವುದಿಲ್ಲ. ಆದರಿಂದ ಮಕ್ಕಳನ್ನು ಹೊಂದಲು ಕಷ್ಟವಾಗಬಹುದು.ಧೂಮಪಾನ ಅಪಾಯಕಾರಿ
ಅನೇಕ ಮಹಿಳೆಯರು ಧೂಮಪಾನ ಮಾಡಲು ಪ್ರಾರಂಭಿಸುತ್ತಾರೆ. ಧೂಮಪಾನ ಮಾಡಿದಾಗ ದೇಹದ ಸ್ಥಿತಿಯು ಹದಗೆಡಲು ಪ್ರಾರಂಭಿಸುತ್ತದೆ. ಇದರಿಂದ AMH ಹಾರ್ಮೊನುಗಳು ಕಡಿಮೆಯಾಗಿ, ಅಂಡಾಣುಗಳ ಗುಣಮಟ್ಟ ಹದಗೆಡುತ್ತದೆ.