ಹೊಸ ಮನೆ, ಹೊಸ ಬಂಧ!
ಮದುವೆಯಾಗಿ ಹೊಸ ಮನೆಗೆ ಹೋಗುವುದು ಪ್ರತಿಯೊಬ್ಬ ಹುಡುಗಿಯ ಜೀವನದಲ್ಲಿ ದೊಡ್ಡ ಬದಲಾವಣೆ. ತನ್ನವರನ್ನು ಬಿಟ್ಟು ಹೊಸ ವಾತಾವರಣ, ಹೊಸ ವ್ಯಕ್ತಿಗಳ ನಡುವೆ ಹೊಂದಿಕೊಳ್ಳುವುದು ಆರಂಭದಲ್ಲಿ ಸ್ವಲ್ಪ ಸವಾಲೆನಿಸಬಹುದು. ನಿಮಗೆ ಈ ಬಗ್ಗೆ ಗೊಂದಲ ಇದ್ದರೆ ನಾವು ಕೆಲವು ಸಲಹೆ ನೀಡಲಿದ್ದೇವೆ.ಮನೆಯ ಪದ್ಧತಿಗಳನ್ನು ತಿಳಿದುಕೊಳ್ಳಿ!
ಹೊಸ ಮನೆಗೆ ಹೋಗುವಾಗ ನಿಮ್ಮ ಮನೆಯ ಸಂಪ್ರದಾಯ ಅಥವಾ ಅಲ್ಲಿನ ರೀತಿ-ನೀತಿಗಳನ್ನೇ ನಿರೀಕ್ಷಿಸಬೇಡಿ. ಆ ಮನೆಯ ಪದ್ಧತಿಗಳನ್ನು ಮುಕ್ತ ಮನಸ್ಸಿನಿಂದ ಕಲಿಯಲು ಪ್ರಯತ್ನಿಸಿ.ಅತ್ತೆ ಜೊತೆ ಮಾತನಾಡಿ
ಯಾವುದೇ ಹೊಸ ಸಂಬಂಧದ ಬಲ ಸಂವಹನದಲ್ಲಿದೆ. ನಿಮಗೆ ಏನಾದರೂ ಇಷ್ಟವಾಗದಿದ್ದರೆ ಅಥವಾ ಅರ್ಥವಾಗದಿದ್ದರೆ ಮನಸ್ಸಿನಲ್ಲೇ ಇಟ್ಟುಕೊಳ್ಳಬೇಡಿ. ಸೌಮ್ಯವಾಗಿ ಅದನ್ನು ಗಂಡನ ಬಳಿ ಅಥವಾ ಮನೆಯವರ ಬಳಿ ಹಂಚಿಕೊಂಡು ಪರಿಹಾರವನ್ನು ಅರಿತುಕೊಳ್ಳಿ.ಮನೆಯವರ ಸ್ವಭಾವವನ್ನು ಅರ್ಥಮಾಡಿಕೊಳ್ಳಿ!
ನಿಮ್ಮ ಮತ್ತು ನಿಮ್ಮ ಹೊಸ ಕುಟುಂಬದ ನಡುವೆ ಗಂಡನೇ ಪ್ರಮುಖ ಕೊಂಡಿ. ಮನೆಯವರ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಪತಿಯ ಸಹಾಯ ಕೇಳಿ. ಜಗಳವಾಡುವ ಬದಲು ಗಂಡನ ಮೂಲಕ ಸೌಮ್ಯವಾಗಿ ಬಗೆಹರಿಸಿಕೊಳ್ಳುವುದು ಉತ್ತಮ.ಮನೆಯವರನ್ನು ಗೌರವಿಸಿ
ನೀವು ನಿಮ್ಮ ಪೋಷಕರನ್ನು ಹೇಗೆ ಪ್ರೀತಿಸುತ್ತೀರೋ, ಹಾಗೆಯೇ ನಿಮ್ಮ ಅತ್ತೆ-ಮಾವಂದಿರನ್ನೂ ಗೌರವಿಸಿ. ಹೊಸ ಮನೆಗೆ ಹೊಂದಿಕೊಳ್ಳಲು ಒಂದೇ ದಿನದಲ್ಲಿ ಸಾಧ್ಯವಿಲ್ಲ. ಇದಕ್ಕೆ ಸಮಯ ಬೇಕು. ಆರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗಬಹುದು ಅಥವಾ ವಾದಗಳಾಗಬಹುದು. ಅಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದಿರಿ.