ನಾಯಿಗಳಿಗೆ ಬೇಕು ಪೌಷ್ಟಿಕ ಆಹಾರ
ನಾಯಿಗಳಿಗೆ ಬೇಕು ಪೌಷ್ಟಿಕ ಆಹಾರ
ನಿಮ್ಮ ನಾಯಿಗಳಿಗೆ ಸುರಕ್ಷಿತವಾಗಿರಬೇಕೆಂದು ನೀವು ಬಯಸುವುದಾದರೆ, ಅವುಗಳಿಗೆ ಮಿತವಾಗಿ ಯಾವುದೇ ಮಸಾಲೆ, ಉಪ್ಪು, ಬೆಣ್ಣೆ ಅಥವಾ ಸಕ್ಕರೆ ಇಲ್ಲದೆ ಇರುವಂಹ ಆಹಾರಗಳನ್ನು ನೀಡುವುದರಿಂದ ನಾಯಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.ಕ್ಯಾರೆಟ್
ಕ್ಯಾರೆಟ್ನಲ್ಲಿ ಕಡಿಮೆ ಕ್ಯಾಲರಿ ಮತ್ತು ವಿಟಮಿನ್ A ಹೇರಳವಾಗಿರುತ್ತದೆ. ಇವುಗಳನ್ನು ನಿಮ್ಮ ನಾಯಿಗೆ ಕೊಡುವುದರಿಂದ ಹಲ್ಲುಗಳನ್ನು ಸ್ವಚ್ಛಗೊಳ್ಳುತ್ತವೆ. ಮತ್ತು ಕುರುಕಲು ತಿಂಡಿಯಾಗಿ ಸೇವಿಸಬಹುದು.ಸೇಬು
ಇದರಲ್ಲಿ ಫೈಬರ್, ವಿಟಮಿನ್ A ಮತ್ತು C ಹೇರಳವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಇವುಗಳ ಬೀಜಗಳನ್ನು ತೆಗೆದು ಚೂರುಗಳಾಗಿ ಕೊಡಿ.ಬ್ಲೂಬೆರ್ರಿ
ಆಂಟಿಆಕ್ಸಿಡೆಂಟ್‌ಗಳ ರಾಜ ಎಂದೇ ಕರೆಯಲಾಗುತ್ತದೆ. ಇದನ್ನು ನಿಮ್ಮ ನಾಯಿಗಳಿಗೆ ನೀಡುವುದರಿಂದ ಇದು ಕಣ್ಣುಗಳು, ಮೆದುಳು ಮತ್ತು ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ.ಕೋಳಿ ಮಾಂಸ
ಹೈ ಪ್ರೋಟೀನ್ ಮೂಲವಾಗಿದ್ದು, ಮೂಳೆ ಇಲ್ಲದೆ, ಚರ್ಮ ತೆಗೆದು ಬೇಯಿಸಿದಮತಹ ಕೋಳಿ ಮಾಂಸವನ್ನು ನೀಡಿ. ಇದು ಶಕ್ತಿ ಮತ್ತು ಸ್ನಾಯುಗಳಿಗೆ ಅತ್ಯುತ್ತಮ ಆಹಾರವಾಗಿದೆ.ಕುಂಬಳಕಾಯಿ
ಫೈಬರ್ ತುಂಬಿರುವುದರಿಂದ ಮಲಬದ್ಧತೆಗೆ ಉತ್ತಮ ಔಷಧಿಯಾಗಿರುತ್ತದೆ. ಇದರ ಸೇವನೆಯು ವಿಟಮಿನ್‌ಗಳು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಸಿಹಿ ಆಲೂಗಡ್ಡೆ
ಸಿಹಿ ಆಲೂಗಡ್ಡೆ ವಿಟಮಿನ್ A, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಇದನ್ನು ನಿಮ್ಮ ನಾಯಿಗಳಿಗೆ ಕೊಡುವುದರಿಂದ ಇದು ಚರ್ಮ, ಕೂದಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.