ಡಾರ್ಕ್ ಚಾಕಲೇಟ್ 
ಫೋಟೋ ಗ್ಯಾಲರಿ

ಮಹಿಳೆಯರಿಗೆ ಡಾರ್ಕ್ ಚಾಕಲೇಟ್ ನೀಡುವ ಹೆಲ್ತ್ ಸೂತ್ರಗಳು! Dark Chocolate Benefits

ಭಾನುಪ್ರಿಯ ಡಿ.ಕೆ

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್ ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲದೆ, ಮಹಿಳೆಯರ ಒಟ್ಟಾರೆ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಪ್ರಬಲ ಆ್ಯಂಟಿ-ಆಕ್ಸಿಡೆಂಟ್‌ಗಳು ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಮುಟ್ಟಿನ ನೋವಿನಿಂದ ಮುಕ್ತಿ

ಋತುಚಕ್ರದ ಸಮಯದಲ್ಲಿ ಕಾಡುವ ಹೊಟ್ಟೆನೋವು ಮತ್ತು ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡಲು ಇದರಲ್ಲಿರುವ ಮೆಗ್ನೀಸಿಯಮ್ ಸಹಕಾರಿಯಾಗಿದೆ.

ಮೂಡ್ ಸುಧಾರಣೆ

ಹಾರ್ಮೋನ್ ಏರುಪೇರಿನಿಂದ ಉಂಟಾಗುವ ಮೂಡ್ ಸ್ವಿಂಗ್ಸ್ ಮತ್ತು ಮಾನಸಿಕ ಒತ್ತಡವನ್ನು ದೂರವಿಟ್ಟು, ಮನಸ್ಸಿನಲ್ಲಿ 'ಹ್ಯಾಪಿ ಹಾರ್ಮೋನ್ಸ್' ಬಿಡುಗಡೆಯಾಗಲು ಇದು ಪ್ರೇರೇಪಿಸುತ್ತದೆ.

ಹೊಳೆಯುವ ಚರ್ಮ

ಇದರಲ್ಲಿರುವ ಫ್ಲೇವನಾಲ್ಸ್ ಚರ್ಮವನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ರಕ್ತ ಪರಿಚಲನೆ ಉತ್ತಮಗೊಳಿಸಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಮೂಲಕ ಮಹಿಳೆಯರಲ್ಲಿ ವಯಸ್ಸಾಗುತ್ತಾ ಬರುವ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಗ್ಗಿಸುತ್ತದೆ.

ತೂಕ ನಿಯಂತ್ರಣ

ನಿಯಮಿತವಾಗಿ ತಿನ್ನುವುದರಿಂದ ಜಂಕ್ ಫುಡ್ ಹಾಗೂ ಅತಿಯಾದ ಸಿಹಿ ತಿನ್ನುವ ಹಂಬಲ ಕಡಿಮೆಯಾಗುತ್ತದೆ, ಇದು ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ.