ಮೊಸರಿನ ಹೇರ್ ಪ್ಯಾಕ್
ಮೊಸರನ್ನು ನೈಸರ್ಗಿಕವಾಗಿ ಹೇರ್ ಕಂಡೀಷನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿದ್ದು, ಇದು ಕೂದಲನ್ನು ಒಳಗಿನಿಂದ ಬಲಪಡಿಸುತ್ತದೆ. ಮೊಸರನ್ನು ತಲೆಗೆ ಹಚ್ಚುವುದರಿಂದ ಕೂದಲು ಒಣಗಿದ, ಒಡೆದ ಭಾಗಗಳನ್ನು ಮೃದುವಾಗಿ ಮಾಡುತ್ತದೆ.ಮೆಂತ್ಯ ಪೇಸ್ಟ್
ಮೆಂತ್ಯವು ನಿಕೋಟಿನ್ ಆಮ್ಲ ಮತ್ತು ಲೆಸಿಥಿನ್ ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಇದು ಕೂದಲಿನ ಬೆಳವಣಿಗೆಯ ದರವನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ನೆನಸಿ ಅದನ್ನು ಮಿಕ್ಸಿ ಮಾಡಿ ಪೇಸ್ಟ್ನ್ನು ಹಚ್ಚುವುದರಿಂದ ಇದು ತಲೆಯ ತುರಿಕೆ, ಹೊಟ್ಟು, ನೆತ್ತಿಯ ಮೇಲಿನ ಸಾಂಕ್ರಾಮಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ.ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯನ್ನು ಕೂದಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಇದ್ದು, ಕೂದಲನ್ನು ಆಳವಾಗಿ ಪೋಷಿಸುತ್ತದೆ. ಇದು ಕೂದಲಿನ ತೇವಾಂಶವನ್ನು ಉಳಿಸುಕೊಳ್ಳುತ್ತದೆ. ಸೀಳಿದ ತುದಿಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಕ್ಯಾಸ್ಟರ್ ಆಯಿಲ್
ಕ್ಯಾಸ್ಟರ್ ಆಯಿಲ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲವು ನೆತ್ತಿಯನ್ನು ಪೋಷಿಸುತ್ತದೆ ಜೊತೆಗೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಎಣ್ಣೆಯನ್ನು ಬಳಸುವುದರಿಂದ ನೆತ್ತಿ ಪೋಷಣೆ ಮಾಡಲು ಸಹಾಯ ಮಾಡುತ್ತದೆ.