ಮುಖದ ಊತ ಹೇಗೆ ಬರುತ್ತದೆ? 
ಫೋಟೋ ಗ್ಯಾಲರಿ

ಮುಖದ ಊತಕ್ಕೆ ಗುಡ್ ಬೈ: ನಿಮ್ಮ ಅಂದ ಹೆಚ್ಚಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! Swelling face

ಭಾನುಪ್ರಿಯ ಡಿ.ಕೆ

ಮುಖದ ಊತ ಹೇಗೆ ಬರುತ್ತದೆ?

ಮುಖದ ಊತ ಸಾಮಾನ್ಯವಾಗಿ ನೀರಿನ ಶೇಖರಣೆ, ಉಪ್ಪು ಹೆಚ್ಚು ಸೇವನೆ, ನಿದ್ರೆ ಕೊರತೆ ಅಥವಾ ಅಲರ್ಜಿ ಮೂಲಕ ಬರುತ್ತದೆ.

ಧಾರಾಳವಾಗಿ ನೀರು ಕುಡಿಯಿರಿ

ದೇಹದಲ್ಲಿ ನೀರಿನ ಕೊರತೆಯಿಂದ ಚರ್ಮವು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ, ಇದರಿಂದ ಮುಖ ಊದಿಕೊಳ್ಳುತ್ತದೆ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಇದು ವಿಷಕಾರಿ ಅಂಶಗಳನ್ನು ಹೊರಹಾಕಿ ಊತವನ್ನು ಕಡಿಮೆ ಮಾಡುತ್ತದೆ.

ಉಪ್ಪು ಸೇವನೆ ಕಡಿಮೆ ಮಾಡಿ

ರಾತ್ರಿ ಹೊತ್ತು ಉಪ್ಪು ಹೆಚ್ಚಿನ ಆಹಾರ ಸೇವಿಸಿದರೆ ಬೆಳಗ್ಗೆ ಮುಖ ಊದಿಕೊಳ್ಳುತ್ತದೆ. ಉಪ್ಪನ್ನು ಮಿತಿಗೊಳಿಸಿ, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನೂ ತಪ್ಪಿಸಿ.

ಕೋಲ್ಡ್ ಕಂಪ್ರೆಸ್ ಅಥವಾ ಐಸ್ ಬಳಸಿ

ತಣ್ಣೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯನ್ನು ಅಥವಾ ಐಸ್ ಪ್ಯಾಕ್ ಅನ್ನು ಮುಖಕ್ಕೆ 10-15 ನಿಮಿಷಗಳ ಕಾಲ ಹಾಕಿ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ ಊತವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಲ್ಲಿ ಮುಖ ತೊಳೆಯಿರಿ.

ಕ್ಯಾರೆಟ್ ಅಥವಾ ಟೀ ಬ್ಯಾಗ್ ಬಳಸಿ

ತಣ್ಣಗಾದ ಕ್ಯಾರೆಟ್ ಸ್ಲೈಸ್‌ಗಳನ್ನು ಮುಖದ ಮೇಲೆ ಇಟ್ಟುಕೊಳ್ಳಿ. ಅಥವಾ ಬ್ಲ್ಯಾಕ್/ಗ್ರೀನ್ ಟೀ ಬ್ಯಾಗ್‌ಗಳನ್ನು ಬಿಸಿ ನೀರಿನಲ್ಲಿ ನೆನೆಸಿ ತಣ್ಣಗಾಗಿ ಮಾಡಿ ಕಣ್ಣುಗಳ ಮೇಲೆ ಇಡಿ. ಇದರಲ್ಲಿ ಇರುವ ಆಂಟಿ-ಇನ್‌ಫ್ಲಮೇಟರಿ ಗುಣಗಳು ಊತ ಕಡಿಮೆ ಮಾಡುತ್ತವೆ.

ಸರಿಯಾಗಿ ನಿದ್ರೆ ಮಾಡಿ

ರಾತ್ರಿ 7-9 ಗಂಟೆಗಳ ನಿದ್ರೆ ಪಡೆಯಿರಿ. ಮಲಗುವಾಗ ತಲೆಯನ್ನು ಸ್ವಲ್ಪ ಎತ್ತರದಲ್ಲಿ ಇರಿಸಿ. ಹೊಟ್ಟೆಯ ಮೇಲೆ ಮಲಗಬೇಡಿ. ಇದು ದ್ರವ ಶೇಖರಣೆಯನ್ನು ತಡೆಯುತ್ತದೆ.