ಮೆದುಳಿನ ಆರೋಗ್ಯ 
ಫೋಟೋ ಗ್ಯಾಲರಿ

ಮೆದುಳಿನ ಆಯಾಸ ತಡೆಯಲು ಗೋಲ್ಡನ್ ರೂಲ್ಸ್! Brain Health

ಭಾನುಪ್ರಿಯ ಡಿ.ಕೆ

ಮೆದುಳಿನ ಆರೋಗ್ಯ

ದೈನಂದಿನ ಒತ್ತಡ ಮತ್ತು ವಿಶ್ರಾಂತಿಯ ಕೊರತೆಯಿಂದ ಮೆದುಳು ಸುಸ್ತಾಗುವುದು ಸಹಜ. ಇದನ್ನು ತಡೆದು ಮನಸ್ಸನ್ನು ಚುರುಕಾಗಿಡಲು 5 ಸರಳ ಸಲಹೆಗಳು ಇಲ್ಲಿವೆ.

ಗಾಢ ನಿದ್ರೆ

ಮೆದುಳಿಗೆ ವಿಶ್ರಾಂತಿ ನೀಡಲು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಕಡ್ಡಾಯ. ನಿದ್ರೆಯ ಸಮಯದಲ್ಲಿ ಮೆದುಳು ತಾನಾಗಿಯೇ ರಿಪೇರಿ ಮಾಡಿಕೊಳ್ಳುತ್ತದೆ ಮತ್ತು ನೆನಪಿನ ಶಕ್ತಿಯನ್ನು ಗಟ್ಟಿಗೊಳಿಸುತ್ತದೆ.

ಡಿಜಿಟಲ್ ಡಿಟಾಕ್ಸ್

ನಿರಂತರವಾಗಿ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸೋಶಿಯಲ್ ಮೀಡಿಯಾ ಬಳಕೆಯಿಂದ ಮೆದುಳು ಬೇಗನೆ ಆಯಾಸಗೊಳ್ಳುತ್ತದೆ. ಕೆಲಸದ ಮಧ್ಯೆ ಪ್ರತಿ 45 ನಿಮಿಷಕ್ಕೊಮ್ಮೆ ಕಣ್ಣು ಮತ್ತು ಮೆದುಳಿಗೆ ವಿಶ್ರಾಂತಿ ನೀಡಿ.

ದೈಹಿಕ ವ್ಯಾಯಾಮ ಮತ್ತು ಪ್ರಾಣಾಯಾಮ

ಪ್ರತಿದಿನ 30 ನಿಮಿಷಗಳ ನಡಿಗೆ ಅಥವಾ ಯೋಗ ಮಾಡಿ. ಆಳವಾದ ಉಸಿರಾಟ ಮಾಡುವುದರಿಂದ ಮೆದುಳಿಗೆ ಆಮ್ಲಜನಕದ ಪೂರೈಕೆ ಹೆಚ್ಚಿ ಆಯಾಸ ತಕ್ಷಣ ಕಡಿಮೆಯಾಗುತ್ತದೆ.

ಮಾನಸಿಕ ವಿರಾಮ

ಸದಾ ಕೆಲಸದಲ್ಲಿ ಮುಳುಗಿರದೆ, ನಡುವೆ ಸಂಗೀತ ಕೇಳುವುದು, ಸಣ್ಣ ನಡಿಗೆ ಮಾಡುವುದು ಅಥವಾ ಇಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೆದುಳು ರಿಫ್ರೆಶ್ ಆಗುತ್ತದೆ.