ಫೋಟೋ ಗ್ಯಾಲರಿ

ಮೊಡವೆ, ಕಪ್ಪು ಕಲೆ ನಿಮ್ಮ ಮುಖದ ಅಂದ ಹಾಳು ಮಾಡ್ತಿದ್ಯಾ?; ವಾರಕ್ಕೆ 3 ಬಾರಿ ಅರಿಶಿನ ಐಸ್​​ಕ್ಯೂಬ್​ ಬಳಸಿ, ತಯಾರಿಸುವ ವಿಧಾನ ಹೀಗಿದೆ..Skin Care

ವಿಜಯವಾಣಿ ಸುದ್ದಿ ಜಾಲ

ಬಿಸಿಲು, ಧೂಳಿನಿಂದ ಮುಖದ ಮೇಲಾಗುವ ಕಪ್ಪು ಕಲೆಯನ್ನು ತೆಗೆದು ಹಾಕಲು ಮನೆಯಲ್ಲಿಯೇ ಕೆಲವೊಂದು ನೈಸರ್ಗಿಕ ವಿಧಾನಗಳಿವೆ. ಮನೆಯಲ್ಲಿ ಸಿಗುವ ಅರಿಶಿನವನ್ನು ಐಸ್​ ಕ್ಯೂಬ್​ನ್ನಾಗಿಸಿಕೊಂಡು ಬಳಕೆ ಮಾಡುವುದರಿಂದ ಇದು ಮುಖದಲ್ಲಿರುವ ಮೊಡವೆ, ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ತಯಾರಿಸುವುದು ಹೇಗೆ?

ಅರಿಶಿನ ಕಾಲು ಟೀ ಸ್ಪೂನ್​, 1 ಕಪ್​ ನೀರು, 1 ಐಸ್​​ ಕ್ಯೂಬ್​ ಟ್ರೇ, ಅಲೋವೆರಾ ಜೆಲ್​ ಅಥವಾ ತುಪ್ಪವನ್ನು ಮಿಕ್ಸ್​​ ಮಾಡಿ. ಐಸ್​ ಕ್ಯೂಬ್​ ಟ್ರೇಗೆ ಹಾಕಿ ರೆಫ್ರಿಜರೇಟರ್​ನಲ್ಲಿ ಇಡಿ. 8-9 ಗಂಟೆ ಬಿಟ್ಟು ಫ್ರಿಜ್​ ನಲ್ಲಿ ಇಡಿ.

ಬಳಕೆ ಮಾಡುವುದು ಹೇಗೆ?

ಅರಿಶಿನ ಐಸ್​ ಕ್ಯೂಬ್​ ತಯಾರಿಸಿದ ನಂತರ ಅದನ್ನು ಬಳಸುವ ಮುನ್ನ ನಿಮ್ಮ ಮುಖವನ್ನು ಪೇಸ್​ ವಾಶ್​ನಿಂದ ಸ್ವಚ್ಛಗೊಳಿಸಿಕೊಳ್ಳಿ, ನಂತರ ಮೃದುವಾದ ಬಟ್ಟೆಯಿಂದ ಜಾಸ್ತಿ ರಬ್​ ಮಾಡದೆ ನೀರಿನಾಂಶ ಇಲ್ಲದಂತೆ ನೋಡಿಕೊಳ್ಳಿ. ಈಗ ನೀವು ತಯಾರಿಸಿದ ಕ್ಯೂಬ್​ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆ ಮೇಲೆ ಮೈಲ್ಡ್​ಆಗಿ ಮಸಾಜ್​ ಮಾಡಿ. ಕೊನೆಗೆ ನಿಮ್ಮ ಮೇಲೆ ಐಸ್​ ಕ್ಯೂಬ್​ನ ನೀರು ಇರಲು ಒಂದೈದು ನಿಮಿಷ ಬಿಡಿ. ಆನಂತರ ತಣ್ಣೀರಿನಿಂದ ಮುಖ ತೊಳೆದು ಲೋಷನ್​ ಹಚ್ಚಿಕೊಳ್ಳಿ.

ಅರಿಶಿನ ಐಸ್​ಕ್ಯೂಬ್ ಪ್ರಯೋಜನ

ಅರಿಶಿನ ಐಸ್​ಕ್ಯೂಬ್​ ನಿಮ್ಮ ಮುಖದ ಮೇಲಿನ ಉರಿಯೂತ ಕಡಿಮೆ ಮಾಡುತ್ತದೆ. ಮೊಡವೆ, ಕಪ್ಪು ಕಲೆಗೆ ಮುಕ್ತಿ ನೀಡುತ್ತದೆ. ಮಾಲಿನ್ಯ ಮತ್ತು ಬಿಸಿಲಿನಿಂದ ಕಾಂತಿ ಕಳೆದುಕೊಂಡ ಮುಖಕ್ಕೆ ಹೊಸ ತೇಜಸ್ಸನ್ನು ನೀಡಲು ಈ ಐಸ್​ಕ್ಯೂಬ್​ ಸಹಾಯ ಮಾಡುತ್ತದೆ. ವಾರದಲ್ಲಿ ಮೂರರಿಂದ ನಾಲ್ಕು ದಿನ ಈ ವಿಧಾನ ಟ್ರೈ ಮಾಡಿ.

ನೆನಪಿಡಿ ಇದು ಸುಕ್ಕು, ನಿಮ್ಮ ಮುಖದ ಬಣ್ಣ ಬದಲಿಸೋದಿಲ್ಲ. ಚರ್ಮದ ಸಮಸ್ಯೆ, ಸೂಕ್ಷ್ಮ ಚರ್ಮ ಹೊಂದಿರುವವರು ಎಂದಿಗೂ ವೈದ್ಯರ ಸಲಹೆ ಮೇರೆಗೆ ಐಸ್​ಕ್ಯೂಬ್​ ಬಳಕೆ ಮಾಡುವುದು ಸರಿಯಾದ ಕ್ರಮ.