ಫೋಟೋ ಗ್ಯಾಲರಿ

ಹೊಟ್ಟೆ ಹುಣ್ಣು, ಗ್ಯಾಸ್ಟಿಕ್​ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಇಲ್ಲಿದೆ ಸಿಂಪಲ್​, ನ್ಯಾಚುರಲ್​ ಹೆಲ್ತ್​ ಟಿಪ್ಸ್..Health Tips

ವಿಜಯವಾಣಿ ಸುದ್ದಿ ಜಾಲ

ಆಧುನಿಕ ಜೀವನ ಶೈಲಿ, ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ದೈಹಿಕ ವ್ಯಾಯಾಮ ಸೇರಿದಂತೆ ನಾನಾ ಕಾರಣಗಳು..ಸಣ್ಣ ಮಕ್ಕಳಿನಿಂದ ವಯಸ್ಕರವರೆಗೂ ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಬಳಲುವಂತೆ ಮಾಡುತ್ತದೆ. ಹೊಟ್ಟೆ ಹುಣ್ಣು ಕಾಡುವಂತೆ ಮಾಡುತ್ತದೆ. ನಿಮಗೂ ಈ ರೀತಿ ಆರೋಗ್ಯ ಕೆಟ್ಟಿದ್ದರೆ, ಮನೆಯಲ್ಲಿಯೇ ಮದ್ದು ತಯಾರಿಸಿಕೊಳ್ಳಬಹುದು. ಹೇಗೆ..ಯಾವುದು ನೈಸರ್ಗಿಕ ಔಷಧ ಹೊಟ್ಟೆ ಸಮಸ್ಯೆಗೆ ಮದ್ದು ಎನ್ನುವುದಕ್ಕೆ ಮಾಹಿತಿ ಈ ಲೇಖನದಲ್ಲಿದೆ.

ನಾಲ್ಕು ವಾರ ಮಜ್ಜಿಗೆ ಕುಡಿಯಿರಿ

ಹೊಟ್ಟೆ ಹುಣ್ಣು ಕಾಣಿಸಿಕೊಂಡಾಗ ನಾಲ್ಕುವಾರ ಮಜ್ಜಿಗೆ ಕುಡಿಯಿರಿ. ಇದರಲ್ಲಿರುವ ತಣ್ಣನೆಯ ಅಂಶ ನಿಮ್ಮ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾವನ್ನು ನಿರ್ನಾಮ ಮಾಡಿ ಉರಿಯೂತ, ಹುಣ್ಣು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಎಲೆಕೋಸು ರಸ

ಎಲೆಕೋಸು ರಸದಲ್ಲಿರುವ ವಿಟಮಿನ್​ ಸಿ, ಕೆ ಮತ್ತು ಆಂಟಿ ಆಕ್ಸಿಡೆಂಟ್​ ಅಂಶಗಳು ಹೊಟ್ಟೆಯಲ್ಲಿ ಕಾಡುವ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಗ್ಲುಟಾಮಿನ್ ಎಂಬ ಅಮೈನೋ ಆಮ್ಲವು ಅಲ್ಸರ್​ನಂತಹ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಗ್ಯಾಸ್ಟ್ರಿಕ್​​, ಹೊಟ್ಟೆ ಹುಣ್ಣಿಗೂ ಮದ್ದು.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್​ ಎಂಬ ಅಂಶ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಪೆಪ್ಟಿಕ್​ ಹುಣ್ಣನ್ನು ತಡೆಗೆಟ್ಟುತ್ತದೆ. ದಿನಕ್ಕೆ ಎರಡು ಬೆಳ್ಳುಳ್ಳಿ ತಿನ್ನುವುದರಿಂದ ಫಲಕಾರಿ ಫಲಿತಾಂಶ ಸಿಗುವುದರಲ್ಲಿ ಎರಡು ಮಾತಿಲ್ಲ.

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು ಹೊಟ್ಟೆಯಲ್ಲಿ ಕಾಡುವ ಹುಣ್ಣಿಗೆ ಮುಕ್ತಿ ನೀಡುತ್ತದೆ. ಮೆಂತ್ಯೆಯನ್ನು ನೀರಿನಲ್ಲಿ ಕುದಿಸಿ, ನೀರನ್ನು ಸೋಸಿ ಕುಡಿಯುವದರಿಂದ ನೈಸರ್ಗಿಕವಾಗಿ ಸಮಸ್ಯೆ ಮುಕ್ತಿ ನೀಡಲು ಸಹಕರಿಸುತ್ತದೆ.

ಜೀರಿಗೆ, ವೀಳ್ಯದೆಲೆ ಕಷಾಯ

ಜೀರಿಗೆ, ವೀಳ್ಯದೆಲೆ ಕಷಾಯ ಮಾಡಿ ಕುಡಿಯುವುದು ದೇಹದ ಆರೋಗ್ಯದ ಪರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶೀತ, ಕೆಮ್ಮು, ಹೊಟ್ಟ ಉರಿಯೂತ, ಹುಣ್ಣು ನಿವಾರಣೆಗೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸಲು ಎರಡು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತದೆ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.