ಬೆಳ್ಳುಳ್ಳಿ ಸಿಪ್ಪೆ
ಬೆಳ್ಳುಳ್ಳಿಯನ್ನು ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಬಳಸಲಾಗುತ್ತದೆ, ಆದರೆ ಅದರ ಸಿಪ್ಪೆಯನ್ನು ಅನಗತ್ಯ ಎಂದು ಎಸೆದುಬಿಡಲಾಗುತ್ತದೆ. ನಿಜಕ್ಕಾದರೆ ಬೆಳ್ಳುಳ್ಳಿ ಸಿಪ್ಪೆಯಲ್ಲಿ ಅಂಟಿಆಕ್ಸಿಡೆಂಟ್‌ಗಳು ಹಾಗೂ ಔಷಧೀಯ ಗುಣಗಳು ಹೇರಳವಾಗಿದ್ದು, ಇದನ್ನು ಅನೇಕ ರೀತಿಯಲ್ಲಿ ಬಳಸಬಹುದು.ರೋಗನಿರೋಧಕ ಶಕ್ತಿ ಹೆಚ್ಚಳ
ಬೆಳ್ಳುಳ್ಳಿ ಸಿಪ್ಪೆಯಲ್ಲಿ ವಿಟಮಿನ್ A, C ಮತ್ತು ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ಇದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ಶೀತ, ಕೆಮ್ಮು ಉಪಶಮನವಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ಚರ್ಮ ಹಾಗೂ ಕೇಶ ರಕ್ಷಣೆ
ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ಮುಖ ತೊಳೆದರೆ ಮೊಡವೆ ಮತ್ತು ಚರ್ಮದ ಅಲರ್ಜಿ ಕಡಿಮೆಯಾಗುತ್ತದೆ. ಈ ನೀರನ್ನು ತಲೆಗೂದಲಿಗೆ ಬಳಸುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.ಅಡುಗೆಯ ರುಚಿ ಹೆಚ್ಚಿಸಲು
ಸೂಪ್, ರಸಂ ಅಥವಾ ತರಕಾರಿ ಸ್ಟಾಕ್ ತಯಾರಿಸುವಾಗ ಬೆಳ್ಳುಳ್ಳಿ ಸಿಪ್ಪೆಯನ್ನು ಸೇರಿಸಿ ಕುದಿಸಿ, ನಂತರ ಸೋಸುವುದರಿಂದ ಅಡುಗೆಗೆ ಉತ್ತಮ ಸುವಾಸನೆ ಹಾಗೂ ಪೋಷಕಾಂಶಗಳು ಸಿಗುತ್ತವೆ.ಗಿಡಗಳಿಗೆ ನೈಸರ್ಗಿಕ ಗೊಬ್ಬರ
ಬೆಳ್ಳುಳ್ಳಿ ಸಿಪ್ಪೆಯನ್ನು ಗಿಡಗಳ ಮಣ್ಣಿಗೆ ಸೇರಿಸುವುದರಿಂದ ಅಥವಾ ನೀರಿನಲ್ಲಿ ನೆನೆಸಿ ಆ ನೀರನ್ನು ಗಿಡಗಳಿಗೆ ಸಿಂಪಡಿಸುವುದರಿಂದ ಕೀಟಬಾಧೆ ತಡೆಯಬಹುದು.ಕೀಟನಾಶಕವಾಗಿ ಬಳಕೆ
ಸಿಪ್ಪೆಯ ಬಲವಾದ ವಾಸನೆಯು ಸೊಳ್ಳೆಗಳು ಮತ್ತು ಸಣ್ಣ ಕ್ರಿಮಿಕೀಟಗಳನ್ನು ದೂರವಿಡಲು ಸಹಕಾರಿಯಾಗಿದೆ.