ದೇಹಕ್ಕೆ ಪೋಷಕಾಂಶಗಳನ್ನು ಹೆಚ್ಚಿಸುವ ಆಹಾರ 
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುವ ಆಹಾರಗಳು! Winter foods

ಭಾನುಪ್ರಿಯ ಡಿ.ಕೆ

ದೇಹಕ್ಕೆ ಪೋಷಕಾಂಶಗಳನ್ನು ಹೆಚ್ಚಿಸುವ ಆಹಾರ

ಚಳಿಗಾಲದಲ್ಲಿ ದೇಹಕ್ಕೆ ಬೆಚ್ಚಗಿನ ಉಷ್ಣತೆ, ರೋಗನಿರೋಧಕ ಶಕ್ತಿ ಮತ್ತು ಶಕ್ತಿ ನೀಡುವ ಪೌಷ್ಟಿಕ ಆಹಾರಗಳು ಅತ್ಯಗತ್ಯ. ಇವುಗಳು ವಿಟಮಿನ್‌ಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವುದರಿಂದ ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶಗಳು ಹೆಚ್ಚಾಗುತ್ತದೆ.

ಕ್ಯಾರೆಟ್​

ಕ್ಯಾರೆಟ್​ನಲ್ಲಿ ವಿಟಮಿನ್ A ಹೆಚ್ಚಾಗಿದ್ದು, ಇದು ಕಣ್ಣುಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಕ್ಯಾರೆಟ್​ನ್ನು ಹಲ್ವಾ ಅಥವಾ ಸಲಾಡ್‌ನಲ್ಲಿ ಸೇವಿಸುವುದು ಉತ್ತಮ.

ಮೆಂತ್ಯ ಸೊಪ್ಪು

ಕಬ್ಬಿಣ, ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಹಾಗಾಗಿ ಮೆಂತ್ಯೆಯನ್ನು ಪರೋಟಾ ಅಥವಾ ಸಾಗು ಮಾಡಿ ಸೇವಿಸಿ. ಇದು ಜೀರ್ಣಕ್ರಿಯೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಸಾಸಿವೆ ಸೊಪ್ಪು

ವಿಟಮಿನ್ A, C, K ಸಮೃದ್ಧವಾಗಿದೆ. ಇದನ್ನು ಪಲ್ಯ, ಸಾಂಬರ್​ ಹಾಗೂ ಸ್ವಲ್ಪ ಬೇಯಿಸಿ ಹಸಿಯಾಗಿ ಸೇವಿಸುವುದರಿಂದ ದೇಹವನ್ನು ಬೆಚ್ಚಗಿಡುತ್ತದೆ.

ಎಳ್ಳು ಮತ್ತು ಬೆಲ್ಲ

ಎಳ್ಳು ಕಬ್ಬಿಣ ಮತ್ತು ಕ್ಯಾಲ್ಸಿಯಂಯನ್ನು ಹೊಂದಿರುತ್ತದೆ. ಹಾಗೆಯೇ ಬೆಲ್ಲ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದರಿಂದ ಎಳ್ಳು ಉಂಡೆ ಮಾಡಿಕೊಂಡು ಸೇವಿಸುವುದು ಉತ್ತಮವಾಗಿರುತ್ತದೆ.

ಡ್ರೈ ಫ್ರೂಟ್ಸ್

ಬಾದಾಮಿ, ವಾಲ್‌ನಟ್, ಖರ್ಜೂರಗಳಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ, ಇದು ದೇಹಕ್ಕೆ ಪ್ರೊಟೀನ್ ಮತ್ತು ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಪ್ರತಿದಿನ ನೆನಸಿಟ್ಟು ಈ ತಿನ್ನಿರಿ.