ಫೋಟೋ ಗ್ಯಾಲರಿ

ಸ್ಟ್ರಾಂಗ್ ಮಸಲ್ಸ್‌ಗಾಗಿ ತಪ್ಪದೇ ಸೇವಿಸಿ ಈ 6 ಸೂಪರ್‌ಫುಡ್‌ಗಳು!

ಬಲವಾದ ಹಾಗೂ ಆರೋಗ್ಯಕರ ಮಾಂಸಖಂಡಗಳ ಬೆಳವಣಿಗೆಗೆ ವ್ಯಾಯಾಮದಷ್ಟೇ ಸರಿಯಾದ ಆಹಾರವೂ ಮುಖ್ಯ. ಅಗತ್ಯ ಪ್ರೋಟೀನ್ ಮತ್ತು ಪೋಷಕಾಂಶಗಳನ್ನು ಒದಗಿಸುವ 6 ಸೂಪರ್‌ಫುಡ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಜಯವಾಣಿ ಸುದ್ದಿ ಜಾಲ

ಚಿಕನ್​

ಕಡಿಮೆ ಕೊಬ್ಬು ಮತ್ತು ಅಧಿಕ ಪ್ರೋಟೀನ್ ಹೊಂದಿರುವ ಚಿಕನ್,​ ಖಂಡಗಳ ಗಾತ್ರ ಹಾಗೂ ಬಲವನ್ನು ಹೆಚ್ಚಿಸಲು ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಪ್ರೇಮಿಗಳಿಗೆ ಅತ್ಯುತ್ತಮ ಆಹಾರ.

ಮೊಟ್ಟೆ

ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್, ಲ್ಯೂಸಿನ್ (Leucine) ಇದ್ದು, ಆಮ್ಲ ಮತ್ತು ಬಿ-ವಿಟಮಿನ್‌ಗಳಿವೆ. ಇವು ಮಾಂಸಖಂಡಗಳ ಬೆಳವಣಿಗೆಗೆ ಅತ್ಯಂತ ಅಗತ್ಯ.

ಪನ್ನೀರ್ ಮತ್ತು ಮೊಸರು

ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಆಯ್ಕೆ. ಇದರಲ್ಲಿರುವ ಕ್ಯಾಸಿನ್ (Casein) ಪ್ರೋಟೀನ್ ನಿಧಾನವಾಗಿ ಜೀರ್ಣವಾಗಿ, ಮಾಂಸಖಂಡಗಳಿಗೆ ಸುದೀರ್ಘ ಅವಧಿಯವರೆಗೆ ಅಗತ್ಯ ಪ್ರೋಟೀನ್ ಪೂರೈಸುತ್ತದೆ.

ಸೇಬು ಮತ್ತು ಬೆರ್ರಿ ಹಣ್ಣುಗಳು

ಇವುಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಶಕ್ತಿ ನೀಡುವ ಗ್ಲುಕೋಸ್, ಕಠಿಣ ವರ್ಕೌಟ್ ನಂತರ ಮಾಂಸಖಂಡಗಳಲ್ಲಿ ಉಂಟಾಗುವ ಆಯಾಸವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಸೋಯಾಬೀನ್

ಸಸ್ಯಾಹಾರಿ ಪ್ರೋಟೀನ್‌ಗಳ ಗಣಿಯಾದ ಸೋಯಾಬೀನ್, ಕಡಲೆ ಮತ್ತು ತೊಗರಿಬೇಳೆಗಳಲ್ಲಿ ಪ್ರೋಟೀನ್ ಜೊತೆಗೆ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು, ಮಾಂಸಖಂಡಗಳ ಶಕ್ತಿಗೆ ಪೂರಕವಾಗಿವೆ.

ಡ್ರೈಪ್ರೂಟ್ಸ್​

ಬಾದಾಮಿ, ವಾಲ್‌ನಟ್ಸ್ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಮ್ಯಾಗ್ನೀಸಿಯಮ್ ಇದ್ದು, ಮಾಂಸಖಂಡಗಳ ಸೆಳೆತವನ್ನು (Muscle Cramps) ತಡೆದು ಅವು ಶಕ್ತಿಯುತವಾಗಲು ನೆರವಾಗುತ್ತವೆ.

ಚಿಕನ್​

ಕಡಿಮೆ ಕೊಬ್ಬು ಮತ್ತು ಅಧಿಕ ಪ್ರೋಟೀನ್ ಹೊಂದಿರುವ ಚಿಕನ್,​ ಖಂಡಗಳ ಗಾತ್ರ ಹಾಗೂ ಬಲವನ್ನು ಹೆಚ್ಚಿಸಲು ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಪ್ರೇಮಿಗಳಿಗೆ ಅತ್ಯುತ್ತಮ ಆಹಾರ.