ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ
ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ
ಪ್ರತಿದಿನ 3-4 ಲೀಟರ್ ನೀರು ಕುಡಿಯುವುದರಿಂದ ಇದು ಚರ್ಮಕ್ಕೆ ಒಳಗಿನಿಂದ ಹೈಡ್ರೇಷನ್ ನೀಡುತ್ತದೆ. ಇದು ಮುಖದ ಹೊಳಪು ಹೆಚ್ಚಿಸಿ, ಒಣಗಿಸುವಿಕೆಯನ್ನು ತಡೆಯುತ್ತದೆ.ನಿಯಮಿತ ಸ್ಕಿನ್‌ಕೇರ್ ರೂಟೀನ್ ಅನುಸರಿಸಿ
ಬೆಳಗ್ಗೆ-ರಾತ್ರಿ ಮುಖವನ್ನು ಸೌಮ್ಯ ಕ್ಲೆನ್ಸರ್‌ನಿಂದ ತೊಳೆದು, ಮಾಶ್ಚರೈಝರ್ ಹಚ್ಚಿರಿ. ನಂತರ ವಾರಕ್ಕೊಮ್ಮೆ ಎಕ್ಸ್‌ಫೋಲಿಯೇಟ್ ಮಾಡಿ. ಇದು ಸತ್ತ ಜೀವಕೋಶವನ್ನು ತೆಗೆದು ಆರೋಗ್ಯಕರ ಹೊಳಪು ನೀಡುತ್ತದೆ.ಸಾಕಷ್ಟು ನಿದ್ರೆ ಮಾಡಿ
ದಿನಕ್ಕೆ 7-9 ಗಂಟೆಗಳ ನಿದ್ರೆ ಚರ್ಮವನ್ನು ರಿಪೇರ್ ಮಾಡಿ, ಕಾಂತಿಯುತವಾಗಿಸುತ್ತದೆ. ನಿದ್ರೆ ಕಡಿಮೆಯಾದರೆ ಮುಖದಲ್ಲಿ ಸುಕ್ಕು ಹೆಚ್ಚಾಗುತ್ತದೆ.ಮುಖಕ್ಕೆ ವ್ಯಾಯಾಮ ಮಾಡಿ
ಸರಳ ಫೇಶಿಯಲ್ ಎಕ್ಸರ್‌ಸೈಸ್‌ಗಳು ಮುಖದ ಸ್ನಾಯುಗಳನ್ನು ಟೋನ್ ಮಾಡಿ, ಇದು ರಕ್ತಸಂಚಾರವನ್ನು ಮಾಡಿ ಚರ್ಮವನ್ನು ಗ್ಲೋ ಮಾಡುತ್ತದೆ.ಸನ್‌ಸ್ಕ್ರೀನ್ ಬಳಸಿ
ಪ್ರತಿದಿನ ಸನ್‌ಸ್ಕ್ರೀನ್ ಹಚ್ಚಿ UV ರಶ್ಮಿಗಳಿಂದ ರಕ್ಷಿಸಿ. ಹಣ್ಣುಗಳು, ತರಕಾರಿಗಳು, ಅರಿಶಿನ-ನಿಂಬೆ ರಸದಂತಹವುಗಳು ಒಳಗಿನಿಂದ ಕಾಂತಿ ನೀಡುತ್ತವೆ.