ಸಂಸ್ಕರಿಸಿದ ಮಾಂಸ
ಧೀರ್ಘಕಾಲದ ವರೆಗೆ ಶೇಕರಿಸಿಟ್ಟ ಮಾಂಸಗಳ ಸೇವನೆ ಕ್ಯಾನ್ಸರ್ ರೋಗಕ್ಕೆ ಮುಕ್ತ ಆಹ್ವಾನ ನೀಡಿದಂತೆ. ಬಹುಕಾಲದ ವರೆಗೆ ಮಾಂಸಗಳನ್ನು ಸಂಸ್ಕರಿಸಿಟ್ಟರೆ ಅವುಗಳಲ್ಲಿ ಇರುವ ನೈಟ್ರೇಟ್ ಮತ್ತು ನೈಟ್ರೈಟ್ ರಸಾಯನಗಳು ದೇಹದಲ್ಲಿ ನೈಟ್ರೋಸಮೈನ್ ಆಗಿ ಪರಿವರ್ತನೆಗೊಳ್ಳುತ್ತವೆ. ಇದು DNA ಗೆ ಹಾನಿ ಉಂಟುಮಾಡುತ್ತದೆ.ಅತಿಯಾಗಿ ಕರಿದ ಆಹಾರಗಳು
ಅತಿಯಾಗಿ ಕರಿದ ಆಹಾರಗಳಲ್ಲಿ ಅಂದರೆ ಬಜ್ಜಿ, ಬೋಂಡಾ, ಫ್ರೈಡ್ ಸ್ನ್ಯಾಕ್ಸ್, ಫ್ರೆಂಚ್ ಫ್ರೈಸ, ಚಿಪ್ಸ್ಇವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಹಲವಾರು ಹಾನಿಕಾರಕ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಬಳಸಿದ ಎಣ್ಣೆಯನ್ನೇ ಪದೇ ಪದೇ ಬಳಸುವುದರಿಂದ ಅಕ್ರೈಲಮೈಡ್ ಎಂಬ ಸಂಯುಕ್ತ ಆಹಾರ ಪದಾರ್ಥಗಳಲ್ಲಿ ಬಿಡುಗಡೆಯಾಗುತ್ತದೆ.ಕೆಂಪು ಮಾಂಸ
ಕೆಂಪು ಮಾಂಸವನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಅದರಲ್ಲಿ HCAs ಮತ್ತು PAHs ಎಂಬ ಅಪಾಯಕಾರಿ ರಸಾಯನಗಳು ರಚನೆಗೊಂಡ ಪರಿಣಾಮ ಕರಳಿನ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲಿಯೂ ಗ್ರಿಲ್ ಹಾಗೂ ಬಾರ್ಬಿಕ್ಯೂ ಮಾಡಿದ ಕೆಂಪು ಮಾಂಸ ಗಟ್ ಮೈಕ್ರೋಬಿಯೋಟಾ ಮೇಲೆ ಪರಿಣಾಮ ಬೀರುವ ಮೂಲಕ ಕ್ಯಾನ್ಸರ್ಗೆ ಕಾರಣವಾಗುತ್ತದೆ.ಸಕ್ಕರೆ ಮತ್ತು ಸಿಹಿ ಪಾನೀಯಗಳು
ಸಕ್ಕರೆ ಇನ್ಸುಲಿನ್ ಮಟ್ಟ ಮತ್ತು ಶರೀರದ ಕೊಬ್ಬನ್ನು ಹೆಚ್ಚಿಸುತ್ತದೆ. ಸಕ್ಕರೆ ಮಿಶ್ರಿತ ಪಾನೀಯಗಳ ದೀರ್ಘಕಾಲಿಕ ಸೇವನೆಯು ಸ್ತನ, ಯಕೃತ್ ಮತ್ತು ಕೊಲನ್ ಕ್ಯಾನ್ಸರ್‌ಗಳನ್ನು ಉಂಟುಮಾಡುತ್ತದೆ. ಹೆಚ್ಚಾದ ಸಕ್ಕರೆ–ಇನ್ಸುಲಿನ್ ಸಂಚಲನ ಟ್ಯೂಮರ್ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಬಹುದು.ಹೆಚ್ಚು ಉಪ್ಪಿನ ಆಹಾರಗಳು
ಉಪ್ಪಿನಕಾಯಿ, ಉಪ್ಪು ಹೆಚ್ಚಿರುವ ಸ್ನ್ಯಾಕ್ಸ್, ಸಂರಕ್ಷಿತ ಮೀನು, ಪ್ಯಾಕ್ ಆಹಾರಗಳು, ಇನ್‌ಸ್ಟಂಟ್ ನೂಡಲ್ಸ್ ಮುಂತಾದವುಗಳು ಗ್ಯಾಸ್ಟ್ರಿಕ್ (ಹೊಟ್ಟೆ) ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.ಮೈಕ್ರೋವೇವ್ ಪಾಪ್‌ಕಾರ್ನ್ ಪ್ಯಾಕೆಟ್‌ಗಳು
ಇನ್‌ಸ್ಟಂಟ್ ಪಾಪ್‌ಕಾರ್ನ್, ಟು ಮಿನಿಟ್ಸ್ ಪಾಪ್‌ಕಾರ್ನ್ ಎಂಬ ಪಾಪ್ಕಾರ್ನ್ಗಳಲ್ಲಿ ಇರುವ PFOA (Perfluorooctanoic acid) ಎಂಬ ರಸಾಯನ ಇದ್ದು, ಇದು ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು. ಇನ್‌ಸ್ಟಂಟ್ ಪಾಪ್ಕಾರ್ನ್ಗಳಲ್ಲಿ ಬೆಣ್ಣೆ ವಾಸನೆಗೆ ಬಳಕೆ ಮಾಡುವ Diacetyl ಕೂಡ ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗುತ್ತದೆ.ಮದ್ಯಪಾನ
ನಿರಂತರ ಮದ್ಯಪಾನವು ಕ್ಯಾನ್ಸರ್ನ್ನು ಉಂಟುಮಾಡುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಮಾಹಿತಿಯೆ ಆಗಿದೆ. ಮದ್ಯಪಾನದಿಂದ ದೇಹದಲ್ಲಿ ಎಂಬ ನೇರ ಕಾರ್ಸಿನೋಜೆನ್ ರೂಪಾಂತರಗೊಳ್ಳುತ್ತದೆ. ಇದು DNAಗೆ ನೇರವಾಗಿ ಹಾನಿಯನ್ನುಂಟು ಮಾಡುತ್ತದೆ. ಮದ್ಯಪಾನವು ಸ್ತನ, ಯಕೃತ್, ಬಾಯಿ, ಕತ್ತು ಕ್ಯಾನ್ಸರ್‌ಗಳೊಂದಿಗೆ ನೇರ ಸಂಬಂಧ ಹೊಂದಿದೆ.