1. ಸಿಟ್ರಸ್ ಹಣ್ಣುಗಳು
ಕಿತ್ತಳೆ ಮತ್ತು ದ್ರಾಕ್ಷಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಆದರೆ ಇವುಗಳಲ್ಲಿ ಆಮ್ಲೀಯತೆ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿಂದರೆ ಹೊಟ್ಟೆಯಲ್ಲಿ ಉರಿ, ಗ್ಯಾಸ್ಟ್ರಿಕ್ ಅಥವಾ ಎದೆಯುರಿ ಕಾಣಿಸಿಕೊಳ್ಳಬಹುದು.2. ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿ ಮೆಗ್ನೀಸಿಯಮ್ ಪ್ರಮಾಣ ಏಕಾಏಕಿ ಹೆಚ್ಚಾಗಿ, ಹೃದಯದ ಆರೋಗ್ಯದ ಮೇಲೆ ಒತ್ತಡ ಬೀರುವ ಸಾಧ್ಯತೆ ಇರುತ್ತದೆ.3. ಪೇರಲ ಅಥವಾ ಸೀಬೆಹಣ್ಣು
ಸೀಬೆಹಣ್ಣಿನಲ್ಲಿ ಕಠಿಣವಾದ ನಾರಿನಂಶ ಇರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆ ನೋವು ಅಥವಾ ಹೊಟ್ಟೆ ಉಬ್ಬರ ಉಂಟಾಗಬಹುದು.4. ಪೇರ್ಸ್ ಹಣ್ಣು
ಪೇರ್ಸ್ ಹಣ್ಣಿನಲ್ಲಿರುವ ಕಚ್ಚಾ ನಾರು ಹೊಟ್ಟೆಯ ಸೂಕ್ಷ್ಮ ಪೊರೆಗಳಿಗೆ ಹಾನಿ ಉಂಟುಮಾಡಬಹುದು. ಇದರಿಂದ ಜೀರ್ಣಕ್ರಿಯೆ ನಿಧಾನವಾಗುವ ಸಾಧ್ಯತೆ ಇರುತ್ತದೆ.5. ಅನಾನಸ್
ಅನಾನಸ್‌ನಲ್ಲಿ 'ಬ್ರೋಮೆಲೈನ್' ಎಂಬ ಕಿಣ್ವ ಮತ್ತು ಹೆಚ್ಚಿನ ಆಮ್ಲೀಯತೆ ಇರುತ್ತದೆ. ಇದು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಹೊಟ್ಟೆಯಲ್ಲಿ ಸೆಳೆತ ಅಥವಾ ಜೀರ್ಣಾಂಗವ್ಯೂಹದ ಅಸ್ವಸ್ಥತೆಗೆ ಕಾರಣವಾಗಬಹುದು.