ಪೇರಲೆ ಹಣ್ಣು
ಚಳಿಗಾಲದಲ್ಲಿ ಪೇರಲೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ ಯನ್ನು ಒದಗಿಸುತ್ತದೆ. ಇದರಿಂದ ಕೆಮ್ಮು, ಜ್ವರ, ಮಲಬದ್ಧತೆ ದೂರವಾಗುತ್ತದೆ.ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನ ಸೇವನೆಯು ದೇಹಕ್ಕೆ ವಿಟಮಿನ್ ಸಿ ಒದಗಿಸುವುದರ ಜೊತೆಗೆ ಚರ್ಮವನ್ನು ಗ್ಲೋ ಮಾಡುತ್ತದೆ. ಹಾಗೆಯೇ ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತದೆ.ಸೇಬು ಹಣ್ಣು
ಪ್ರತಿನಿತ್ಯ ಸೇಬು ಹಣ್ಣನ್ನು ಸೇವಿಸುವುದರಿಂದ ಇದು ಕರುಳನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ.ದಾಳಿಂಬೆ
ದಾಳಿಂಬೆ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಾಗೆಯೇ ಇದು ಚರ್ಮಕ್ಕೆ ಕಾಂತಿ ನೀಡುವುದರ ಜೊತೆಗೆ ಮೊಡವೆಯನ್ನು ಕಡಿಮೆ ಮಾಡುತ್ತದೆ.ಸೀತಾಫಲ
ಸೀತಾಫಲವನ್ನು ಚಳಿಗಾಲದ ಸಿಹಿ ರಾಣಿ ಎಂದೇ ಕರೆಯಲಾಗುತ್ತದೆ. ಇದರಲ್ಲಿರುವ ಮೆಗ್ನೀಶಿಯಂ, ಪೊಟ್ಯಾಸಿಯಂ, ವಿಟಮಿನ್ B6 ನಿದ್ರೆಯನ್ನು ಚನ್ನಾಗಿ ಮಾಡಿಸುತ್ತವೆ.