ಉರಿಯೂತಕ್ಕೆ ಗುಡ್-ಬೈ 
ಫೋಟೋ ಗ್ಯಾಲರಿ

ದೇಹದ ಉರಿಯೂತಕ್ಕೆ ಗುಡ್-ಬೈ ಹೇಳಲು ಈ ಆಹಾರ ಸೇವಿಸಿ! Inflammation

ಭಾನುಪ್ರಿಯ ಡಿ.ಕೆ

ಉರಿಯೂತಕ್ಕೆ ಗುಡ್-ಬೈ

ದೇಹದಲ್ಲಿ ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳು ಸಾಮಾನ್ಯವಾಗಿ ಆಂಟಿಆಕ್ಸಿಡೆಂಟ್‌ಗಳು, ಒಮೆಗಾ-3 ಕೊಬ್ಬುಗಳು ಮತ್ತು ಇತರ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉರಿಯೂತ ಕಡಿಮೆಯಾಗಿ ಆರೋಗ್ಯ ಸುಧಾರಣೆಯಾಗುತ್ತದೆ.

ಶುಂಠಿ

ಶುಂಠಿಯಲ್ಲಿರುವ ಜಿಂಜರಾಲ್ ಮತ್ತು ಇತರ ಸಂಯುಕ್ತಗಳು ಉರಿಯೂತವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಚಹಾ, ಊಟ ಅಥವಾ ಹಸಿಯಾಗಿ ಕೂಡ ಸೇವಿಸಬಹುದು.

ಬೆರ್ರಿ ಹಣ್ಣುಗಳು

ಆಂಥೋಸಯಾನಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿರುತ್ತದೆ. ಇದನ್ನು ಸೇವಿಸುವುದರಿಂದ ಉರಿಯೂತವನ್ನು ತಡೆದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಕೊಬ್ಬಿನ ಮೀನು

ಒಮೆಗಾ-3 ಫ್ಯಾಟಿ ಆಸಿಡ್‌ಗಳು ಇರುವುದರಿಂದ ಇದು ಉರಿಯೂತದ ಮಾರ್ಕರ್‌ಗಳನ್ನು ಕಡಿಮೆ ಮಾಡುತ್ತವೆ. ಹಾಗಾಗಿ ವಾರಕ್ಕೆ 2-3 ಬಾರಿ ಸೇವಿಸಿರಿ.

ಹಸಿರು ಎಲೆ ತರಕಾರಿಗಳು

ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಿಂದ ತುಂಬಿರುವ ಇವು ದೇಹದ ಉರಿಯೂತವನ್ನು ನಿಯಂತ್ರಿಸುತ್ತವೆ.

ಅರಿಶಿನ

ಕರ್ಕ್ಯುಮಿನ್ ಎಂಬ ಸಕ್ರಿಯ ಅಂಶವು ಬಲವಾದ ಉರಿಯೂತ ನಿರೋಧಕ ಗುಣ ಹೊಂದಿದೆ. ಇದನ್ನು ಕರಿಮೆಣಸಿನೊಂದಿಗೆ ಸೇರಿಸಿ ಸೇವಿಸುವುದರಿಂದ ಉರಿಯೂತವನ್ನು ಕಡಿಮೆ ಮಾಡಬಹುದು.