ತೂಕ ಇಳಿಸುವುದು ಹೇಗೆ? 
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ! Weight loss

ಭಾನುಪ್ರಿಯ ಡಿ.ಕೆ

ತೂಕ ಇಳಿಸುವುದು ಹೇಗೆ?

ತೂಕ ಇಳಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಹಾಗಾಗಿ ಕಠಿಣ ದಿನಚರಿಗಳನ್ನು ಆಯ್ಕೆ ಮಾಡುವುದರ ಜೊತೆಗೆ ಈ ಆಹಾರಗಳನ್ನು ಸೇವಿಸಿ.

ಕ್ಯಾರೆಟ್

ಕ್ಯಾರೆಟ್​ನಲ್ಲಿ ಫೈಬರ್ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಇದನ್ನು ಹಸಿಯಾಗಿ, ಸಲಾಡ್ ಅಥವಾ ಸೂಪ್‌ನಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ತೂಕ ಕಡಿಮೆ ಮಾಡುತ್ತದೆ.

ಪಾಲಕ್ ಸೊಪ್ಪು

ಇದು ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್ ಮತ್ತು ವಿಟಮಿನ್ ಹೊಂದಿದೆ. ಹಾಗಾಗಿ ಇದನ್ನು ಆಹಾರ ಪದಾರ್ಥಗಳಲ್ಲಿ ಸೇವಿಸುವುದರಿಂದ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಿಹಿ ಆಲೂಗಡ್ಡೆ

ಸಿಹಿ ಆಲೂಗಡ್ಡೆಗಳಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಇದು ರಕ್ತದೊತ್ತಡ ನಿಯಂತ್ರಿಸಿ ತೂಕ ಇಳಿಸುತ್ತದೆ.

ಕಿತ್ತಳೆ ಹಣ್ಣುಗಳು

ಈ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಮೆಟಾಬಾಲಿಸಂ ಹೆಚ್ಚಿಸಿ ಕೊಬ್ಬು ಕರಗಿಸುತ್ತದೆ. ಹಾಗಾಗಿ ಪ್ರತಿದಿನ 1-2 ಹಣ್ಣುಗಳನ್ನು ತಿನ್ನಿ

ಹೂಕೋಸು

ಕಡಿಮೆ ಕ್ಯಾಲರಿ, ಹೆಚ್ಚು ಫೈಬರ್​ನ್ನು ಇದು ಹೊಂದಿರುತ್ತದೆ. ಹಾಗಾಗಿ ಇದನ್ನು ಗೋಬಿ ಮತ್ತು ಪರಾಠದೊಂದಿಗೆ ಸೇವಿಸುವುದರಿಂದ ಇದು ಆರೋಗ್ಯಕ್ಕೆ ಪ್ರಯೋಜನ ನೀಡುವುದರ ಜೊತೆಗೆ ತೂಕ ಕಡಿಮೆ ಮಾಡುತ್ತದೆ.

ಹಸಿರು ತರಕಾರಿಗಳು

ಈ ತರಕಾರಿಗಳಲ್ಲಿ ಆಂಟೀಆಕ್ಸಿಡೆಂಟ್‌ಗಳು ಹೆಚ್ಚಾಗಿರುತ್ತದೆ. ಇದರ ನಿಯಮಿತ ಸೇವನೆಯು ತೂಕ ನಿಯಂತ್ರಣಕ್ಕೆ ಉತ್ತಮವಾಗಿದೆ.