ಕಣ್ಣಿನ ಆರೋಗ್ಯ 
ಫೋಟೋ ಗ್ಯಾಲರಿ

ಕಣ್ಣು ಸದಾ ಶಾರ್ಪ್ ಆಗಿರಲು ಈ ಆಹಾರ ಸೇವಿಸಿ! Eye Health

ಭಾನುಪ್ರಿಯ ಡಿ.ಕೆ

ಕಣ್ಣಿನ ಆರೋಗ್ಯ

ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ರೀನ್ ಬಳಕೆ ಹೆಚ್ಚಿ ಕಣ್ಣಿನ ಆಯಾಸ ಹಾಗೂ ದೃಷ್ಟಿ ಮಂದವಾಗುತ್ತಿದೆ. ಕೇವಲ ಔಷಧಗಳಲ್ಲದೆ, ವಿಟಮಿನ್ ಎ, ಸಿ ಮತ್ತು ಒಮೆಗಾ-3 ಸಮೃದ್ಧವಾಗಿರುವ ನೈಸರ್ಗಿಕ ಆಹಾರಗಳನ್ನು ದಿನನಿತ್ಯ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಸುಧಾರಿಸಿಕೊಳ್ಳಬಹುದು.

ಕ್ಯಾರೆಟ್

ಕ್ಯಾರೆಟ್‌ನಲ್ಲಿ ವಿಟಮಿನ್ 'ಎ' ಮತ್ತು ಬೀಟಾ-ಕಾರೋಟಿನ್ ಸಮೃದ್ಧವಾಗಿದೆ. ಇದು ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸಲು ಮತ್ತು ರಾತ್ರಿ ಕುರುಡುತನವನ್ನು ತಡೆಯಲು ಸಹಾಯ ಮಾಡುತ್ತದೆ.

ಹಸಿರು ಎಲೆ ತರಕಾರಿಗಳು

ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು ಮತ್ತು ಬ್ರೊಕೊಲಿಯಲ್ಲಿ ಲ್ಯೂಟಿನ್ ಮತ್ತು ಝೀಕ್ಸಾಂಥಿನ್ ಎಂಬ ಆಂಟಿ ಆಕ್ಸಿಡೆಂಟ್‌ಗಳಿವೆ. ಇವು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣನ್ನು ರಕ್ಷಿಸುತ್ತವೆ.

ನೆಲ್ಲಿಕಾಯಿ ಮತ್ತು ಸಿಟ್ರಸ್ ಹಣ್ಣುಗಳು

ಬೆಟ್ಟದ ನೆಲ್ಲಿಕಾಯಿ, ಕಿತ್ತಳೆ ಮತ್ತು ನಿಂಬೆಹಣ್ಣಿನಲ್ಲಿ ವಿಟಮಿನ್ 'ಸಿ' ಹೇರಳವಾಗಿದೆ. ಇದು ಕಣ್ಣಿನ ರಕ್ತನಾಳಗಳನ್ನು ಆರೋಗ್ಯವಾಗಿಡಲು ಮತ್ತು ಪೊರೆ ಬರುವುದನ್ನು ತಡೆಯಲು ನೆರವಾಗುತ್ತದೆ.

ಬಾದಾಮಿ ಮತ್ತು ನಟ್ಸ್

ಬಾದಾಮಿ ಮತ್ತು ವಾಲ್‌ನಟ್ಸ್‌ನಲ್ಲಿ ವಿಟಮಿನ್ 'ಇ' ಹಾಗೂ ಒಮೆಗಾ-3 ಫ್ಯಾಟಿ ಆಸಿಡ್‌ಗಳು ಇರುತ್ತವೆ. ಇವು ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಮಂದವಾಗುವುದನ್ನು ತಡೆಯುತ್ತವೆ.

ಮೀನು ಅಥವಾ ಅಗಸೆ ಬೀಜಗಳು

ಸಲ್ಮನ್, ಟ್ಯೂನಾ ಮುಂತಾದ ಮೀನುಗಳಲ್ಲಿ ಹಾಗೂ ಸಸ್ಯಾಹಾರಿಗಳಿಗೆ ಅಗಸೆ ಬೀಜಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಹೆಚ್ಚಿರುತ್ತದೆ. ಇದು ಕಣ್ಣು ಒಣಗುವಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.