ಮುಟ್ಟು 
ಫೋಟೋ ಗ್ಯಾಲರಿ

ನೋವು ಮುಕ್ತ ಮುಟ್ಟಿನ ಸಮಯಕ್ಕಾಗಿ ಈ ಆಹಾರಗಳನ್ನು ಸೇವಿಸಿ! Periods pain

ಭಾನುಪ್ರಿಯ ಡಿ.ಕೆ

ಮುಟ್ಟು

ಮುಟ್ಟಿನ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು, ಉಬ್ಬರ ಮತ್ತು ಮೂಡ್ ಸ್ವಿಂಗ್ಸ್ ಹೆಚ್ಚಾಗಬಹುದು. ಆದ್ದರಿಂದ ಈ ಕೆಳಗಿನ ಆಹಾರಗಳಿಂದ ದೂರವಿರುವುದು ಉತ್ತಮ

ಹಣ್ಣುಗಳು

ಕಲ್ಲಂಗಡಿ ಮತ್ತು ಸೌತೆಕಾಯಿಯಂತಹ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಸೇಬು ಮತ್ತು ಬಾಳೆಹಣ್ಣು ಕೂಡ ಉತ್ತಮ.

ಹಸಿರು ಎಲೆ ತರಕಾರಿಗಳು

ಮುಟ್ಟಿನ ಸಮಯದಲ್ಲಿ ರಕ್ತಸ್ರಾವದಿಂದಾಗಿ ದೇಹದಲ್ಲಿ ಕಬ್ಬಿಣದಂಶ ಕಡಿಮೆಯಾಗಬಹುದು. ಪಾಲಕ್ ಸೊಪ್ಪು ಮತ್ತು ಇತರ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ಕಬ್ಬಿಣದಂಶ ವೃದ್ಧಿಯಾಗುತ್ತದೆ.

ಶುಂಠಿ ಟೀ

ಶುಂಠಿಯು ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ. ಇದು ಮುಟ್ಟಿನ ಸೆಳೆತ ಮತ್ತು ವಾಕರಿಕೆ ಭಾವನೆಯನ್ನು ಕಡಿಮೆ ಮಾಡುತ್ತದೆ.

ಡಾರ್ಕ್ ಚಾಕೊಲೇಟ್

ಇದರಲ್ಲಿ ಮೆಗ್ನೀಸಿಯಮ್ ಮತ್ತು ಕಬ್ಬಿಣದಂಶ ಸಮೃದ್ಧವಾಗಿದೆ. ಇದು ನಿಮ್ಮ ಮೂಡ್ ಅನ್ನು ಸುಧಾರಿಸಲು ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೊಸರು

ಮೊಸರಿನಲ್ಲಿರುವ ಕ್ಯಾಲ್ಸಿಯಂ ಮತ್ತು ಪ್ರೋಬಯಾಟಿಕ್ಸ್ ಸ್ನಾಯುಗಳ ಸೆಳೆತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿ.