ದಾಳಿಂಬೆ  
ಫೋಟೋ ಗ್ಯಾಲರಿ

ವಯಸ್ಸಾದಂತೆಯೂ ಯೌವನದಿಂದ ಕಾಣಲು ಈ 5 ಆಹಾರಗಳನ್ನು ಸೇವಿಸಿ| beauty secret

ಭಾನುಪ್ರಿಯ ಡಿ.ಕೆ

ದಾಳಿಂಬೆ

ದಾಳಿಂಬೆ ಚರ್ಮವು ಚರ್ಮ ರಕ್ಷಣೆಗೆ ಅದ್ಭುತವಾದಂತಹ ಆಹಾರವಾಗಿದೆ. ಇದರಲ್ಲಿರುವ ಪಾಲಿಫೆನಾಲ್‌ಗಳು, ಫ್ಲ್ಯಾವೊನಾಯ್ಡ್‌ಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ.

ಎಳನೀರು

ತೆಂಗಿನ ನೀರು ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್‌ಗಳ ಮೂಲವಾಗಿದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ಗಳು ದೇಹ ಮತ್ತು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಒದಗಿಸುತ್ತದೆ.

ಅಲೋವೆರಾ

ಅಲೋವೆರಾ ಚರ್ಮವನ್ನು ಶಾಂತಗೊಳಿಸುವಂತಹ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಅಸ್ಮನ್ನನ್​ ಎಂಬ ಅಂಶವು ಚರ್ಮದ ರಕ್ಷಣಾತ್ಮಕ ತಡೆಗೋಡೆಯನ್ನು ಬಲಪಡಿಸುತ್ತದೆ.

ಪಿಸ್ತಾ

ಪ್ರತಿನಿತ್ಯ ಪಿಸ್ತವನ್ನು ಸೇವಿಸುವುದರಿಂದ ಇದು ಚರ್ಮ ರಕ್ಷಣೆಯನ್ನು ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಇ ಇರುವುದರಿಂದ ಫ್ರೀ ರಾಡಿಕಲ್‌ಗಳನ್ನು ನಿಯಂತ್ರಿಸಿ, ಮುಂಚಿತ ವಯಸ್ಸು, ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ.

ಕೇಸರಿ

ಪ್ರಾಚೀನ ಕಾಲದಿಂದಲೂ ಕೇಸರಿಯನ್ನು ಸೌಂದರ್ಯದ ಸಂಗಾತಿ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಕ್ರೋಸಿನ್ ಮತ್ತು ಸಫ್ರನಲ್ ಎಂಬ ಉತ್ಕರ್ಷಣ ನಿರೋಧಕಗಳು ಚರ್ಮದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.