ಮಸಾಲಾ ಚಹಾ  
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವ ಪಾನೀಯಗಳು

ಭಾನುಪ್ರಿಯ ಡಿ.ಕೆ

ಮಸಾಲಾ ಚಹಾ

ಏಲಕ್ಕಿ, ಲವಂಗ, ದಾಲ್ಚಿನ್ನಿ, ಶುಂಠಿ, ಕಾಳುಮೆಣಸು, ತುಳಸಿ – ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ಚಹಾ ಮಾಡಿ ಕುಡಿಯುವುದರಿಂದ ಚಳಿಗಾಲದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬಹುದು.

ಶುಂಠಿ ಚಹಾ

ತಾಜಾ ಶುಂಠಿಯನ್ನು ನೀರಿನಲ್ಲಿ ನೆನಸಿ ಅದಕ್ಕೆ 8 ತುಳಸಿ ಎಲೆ, ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದುಸಿ ಕುಡಿಯುವುದರಿಂದ ಜ್ವರ, ಗಂಟಲು ಕೆರೆತ ಎಲ್ಲಾ ಮಾಯವಾಗುತ್ತದೆ.

ಕೇಸರಿ–ಬಾದಾಮಿ ಹಾಲು

ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್​ ಕೇಸರಿ ಮಿಶ್ರಿತ ಬಾದಾಮಿ ಹಾಲನ್ನು ಕುಡಿಯುವುದರಿಂದ ಚೆನ್ನಾಗಿ ನಿದ್ರೆಯನ್ನು ಮಾಡಬಹುದು. ಇದು ದೇಹವನ್ನು ಒಳಗಿನಿಂದ ಬೆಚ್ಚಗಿರಿಸುತ್ತದೆ.

ಲೆಮನ್ ಟೀ

ನಿಂಬೆ ರಸ ಮತ್ತು ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಇದು ದೇಹಕ್ಕೆ ಇಮ್ಯೂನಿಟಿ ಬೂಸ್ಟ್​ನ್ನು ನೀಡುತ್ತದೆ. ಜೊತೆಗೆ ಚಳಿಗೆ ಒಳ್ಳೆ ರಿಲೀಫ್​ ಆಗುತ್ತದೆ.

ರಾಗಿ ಕಾಳುಮೆಣಸು ಗಂಜಿ

ರಾಗಿ ಹಿಟ್ಟು, ಕಾಳು ಮೆಣಸಿನ ಪುಡಿ, ಬೆಲ್ಲ ಮತ್ತು ಏಲಕ್ಕಿ ಸೇರಿಸಿ ಪಾನಕ ಮಾಡಿ ಕುಡಿಯುವುದರಿಂದ ಇದು ಚಳಿಯನ್ನು ಹೋಗಲಾಡಿಸುತ್ತದೆ.