ಅಸಲಿಗೆ ಆಲ್ಕೋಹಾಲ್ ಹಸಿವನ್ನು ಹೆಚ್ಚಿಸುತ್ತದೆ 
ಫೋಟೋ ಗ್ಯಾಲರಿ

ಮದ್ಯ ಕುಡಿದ ಬಳಿಕ ವಿಪರೀತ ಹೊಟ್ಟೆ ಹಸಿಯುವುದೇಕೆ? ಇಲ್ಲಿದೆ ನೋಡಿ ವಿವರವಾದ ಉತ್ತರ | Drinking Alcohol

migrator

ಅಸಲಿಗೆ ಆಲ್ಕೋಹಾಲ್ ಹಸಿವನ್ನು ಹೆಚ್ಚಿಸುತ್ತದೆ

ಅಸಲಿಗೆ ಆಲ್ಕೋಹಾಲ್ ಹಸಿವನ್ನು ಹೆಚ್ಚಿಸುತ್ತದೆ. ಏಕೆಂದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿತಗೊಳಿಸುತ್ತದೆ. ಮದ್ಯವು ನಿಮ್ಮ ಮಿದುಳನ್ನು ಹಸಿವಿನ ಬಾಗಿಲನ್ನು ಬಡಿಯುವಂತೆ ಮಾಡುತ್ತದೆ. ಕುಡಿತದಿಂದ ಮಿದುಳಿನ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಹೀಗಾಗಿ, ಏನಾದರೂ ತಿನ್ನಬೇಕು ಅನಿಸುತ್ತದೆ. ಲಘು ಆಹಾರ ಸವಿದರೂ ಭಾರೀ ಪ್ರಮಾಣದಲ್ಲಿ ಸೇವಿಸಬೇಕು ಎಂಬ ಬಯಕೆ

ಹಸಿವಿಗೆ ಮದ್ಯ ಹೇಗೆಲ್ಲ ಕಾರಣ?

ಮಿದುಳಿನ ಮೇಲೆ ಪರಿಣಾಮ: ಹಸಿವು ಸೇರಿದಂತೆ ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಮಿದುಳಿನ ಭಾಗವಾದ ಹೈಪೋಥಾಲಮಸ್ ಮೇಲೆ ಮದ್ಯವು ಪರಿಣಾಮ ಬೀರುತ್ತದೆ. 2017ರ ಸಂಶೋಧನೆಯು ಆಲ್ಕೋಹಾಲ್ ಹಸಿವನ್ನು ಸೂಚಿಸುವ ಕೆಲವು ನರಕೋಶಗಳನ್ನು (AgRP ನರಕೋಶಗಳು) ಸಕ್ರಿಯಗೊಳಿಸುತ್ತದೆ ಎಂದು ತೋರಿಸಿದೆ. ಇದು ನಿಮಗೆ ಏನಾದರೂ ತಿನ್ನುವಂತೆ ಹೇಳುತ್ತದೆ.

ರುಚಿ ಹೆಚ್ಚಳ, ವಾಸನೆಯ ಸಂವೇದನೆ

ಮದ್ಯವು, ನೀವು ತಿನ್ನುವ ಆಹಾರ ರುಚಿ ಮತ್ತು ವಾಸನೆಯನ್ನು ದ್ವಿಗುಣಗೊಳಿಸುತ್ತದೆ. ಕುಡಿತಕ್ಕೂ ಮುನ್ನ ಇಲ್ಲದ ರುಚಿ, ಘಮಲು ಕುಡಿದ ಬಳಿಕ ಹೆಚ್ಚುತ್ತದೆ. ಈ ವರ್ಧಿತ ಸಂವೇದನಾ ಗ್ರಹಿಕೆಗೆ ಹೈಪೋಥಾಲಮಸ್ ಕೂಡ ಒಂದು ಬಲವಾದ ಕಾರಣ.

ರಕ್ತದಲ್ಲಿನ ಸಕ್ಕರೆ ಅಂಶ ಇಳಿಕೆ

ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕುಸಿಯುವಂತೆ ಮಾಡುತ್ತದೆ. ಇದು ಆಯಾಸಕ್ಕೂ ಕಾರಣವಾಗಬಹುದು. ಮಿದುಳು ಹಸಿವನ್ನು ಸೂಚಿಸುವ ಮೂಲಕ ಸರಿದೂಗಿಸುತ್ತದೆ. ಹೆಚ್ಚಾಗಿ ಸಿಹಿ ಅಥವಾ ಉಪ್ಪು ಆಹಾರಕ್ಕಾಗಿ ಮಿದುಳು ಹುಡುಕಾಡುತ್ತದೆ.

ನಿಯಂತ್ರಣ ಕಳೆದುಕೊಳ್ಳುವಿಕೆ

ಕುಡಿತದಿಂದ ನಾವು ತೆಗೆದುಕೊಳ್ಳುವ ನಿರ್ಧಾರ ಮತ್ತು ನಮ್ಮ ಮೇಲೆ ನಮಗಿರಬೇಕಾದ ಕಂಟ್ರೋಲ್​ ತಪ್ಪುತ್ತದೆ. ಆರೋಗ್ಯಕರ ಆಯ್ಕೆಗಳಿಗಿಂತ ಹೆಚ್ಚಿನ ಕ್ಯಾಲೋರಿ ಆಹಾರಗಳೇ ಬೇಕು ಅನಿಸುತ್ತದೆ. ಕರಿದ ಅಥವಾ ಜಂಕ್ ಫುಡ್​ ಬೇಡ ಎಂದು ಹೇಳುವುದು ಕೊಂಚ ಕಷ್ಟಕರವೇ