ದಂಡ, ಬಡ್ಡಿ ಸಮೇತ ಆಗುತ್ತೆ ವಸೂಲಿ | PF Money
ದಂಡ, ಬಡ್ಡಿ ಸಮೇತ ಆಗುತ್ತೆ ವಸೂಲಿ | PF Money
ಉದ್ಯೋಗಿಗಳ ಭವಿಷ್ಯ ನಿಧಿ ನಿವೃತ್ತಿ ಪಡೆದ ಬಳಿಕ ಮತ್ತು ಕರ್ತವ್ಯದ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸುತ್ತದೆ. ಅದು ಅನಾರೋಗ್ಯ, ತುರ್ತು ಪರಿಸ್ಥಿತಿ, ಮನೆ ಕಟ್ಟಲು ಸೇರಿದಂತೆ ಇನ್ನಿತರ ಬಹುಮುಖ್ಯ ಕಾರಣಗಳಿಗೆ ಒಳಪಡುತ್ತದೆ.ತುರ್ತು ಪರಿಸ್ಥಿತಿ ಇಲ್ಲದಿದ್ದರೂ ತಪ್ಪು ಕಾರಣ
ಅನೇಕರು ತುರ್ತು ಪರಿಸ್ಥಿತಿ ಇಲ್ಲದಿದ್ದರೂ ತಪ್ಪು ಕಾರಣವನ್ನು ನೀಡಿ ತಮ್ಮ ಪಿಎಫ್ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಊಟಿಗೆ ಪ್ರವಾಸಕ್ಕೆಂದು ಹಣ ಪಡೆದರೆ, ಇನ್ನೂ ಕೆಲವರು ಐಷಾರಾಮಿ ಗಾಡಿಯನ್ನು ಖರೀದಿಸಲು ಬಳಿಸಿಕೊಳ್ಳುತ್ತಾರೆ.ಬ್ರೇಕ್ ಹಾಕಲು ಇಪಿಎಫ್ಓ ನಿರ್ಧಾರ
ಇದಕ್ಕೆಲ್ಲ ಬ್ರೇಕ್ ಹಾಕಲು ಇಪಿಎಫ್ಓ ಮುಂದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. 2025ರಲ್ಲಿ, ತಪ್ಪು ಕಾರಣವನ್ನು ಉಲ್ಲೇಖಿಸಿ ಪಿಎಫ್ ನಿಧಿಯಿಂದ ಹಣವನ್ನು ಹಿಂಪಡೆಯುವವರಿಗೆ ಭಾರೀ ದಂಡವನ್ನು ವಿಧಿಸುತ್ತಿದೆ. ಇದಲ್ಲದೆ, ಡ್ರಾ ಆದ ಮೊತ್ತದ ಮೇಲೆ ಬಡ್ಡಿಯೊಂದಿಗೆ ದಂಡವನ್ನು ಸಹ ಸಂಗ್ರಹಿಸುತ್ತಿದೆ. ಈ ನಿಟ್ಟಿನಲ್ಲಿ, EPFO ತನ್ನ ಪಿಎಫ್ ಸದಸ್ಯರಿಗೆ ಎಚ್ಚರಿಕೆ ನೀಡಿದೆಸುಳ್ಳು ಕಾರಣಕ್ಕೆ ಬಡ್ಡಿ ಮತ್ತು ದಂಡ
ಯಾವುದೇ ಸದಸ್ಯರು ತಮ್ಮ ಪಿಎಫ್ ಹಣವನ್ನು ಹಿಂಪಡೆಯಲು ಸುಳ್ಳು ಕಾರಣವನ್ನು ನೀಡಿದರೆ, ಉದಾಹರಣೆಗೆ, ಅದು ಮನೆ ಖರೀದಿಸಲು ಮತ್ತು ನಂತರದಲ್ಲಿ ಹಣವನ್ನು ಬೇರೆ ಉದ್ದೇಶಕ್ಕಾಗಿ ಬಳಸುವುದಾಗಿ ಹೇಳಿದರೆ, ಇಪಿಎಫ್ಓ ಈ ಹಣವನ್ನು ಬಡ್ಡಿಯೊಂದಿಗೆ ಸಂಗ್ರಹಿಸುವ ಹಕ್ಕನ್ನು ಹೊಂದಿದೆ ಮತ್ತು ದಂಡವನ್ನು ವಿಧಿಸಲಿದೆ.