ಹಾಲಿನ ಉತ್ಪನ್ನಗಳು 
ಫೋಟೋ ಗ್ಯಾಲರಿ

ನಿಮ್ಮ ಮುದ್ದಿನ ಪ್ರಾಣಿಗಳಿಗೆ ಮರೆತೂ ಇವುಗಳನ್ನು ತಿನ್ನಿಸಬೇಡಿ! Dog

ಸವಿನಾ ನಾಯ್ಕ

ಹಾಲಿನ ಉತ್ಪನ್ನಗಳು

ಆಶ್ಚರ್ಯವೆನಿಸಿದರೂ ಇದು ನಿಜ. ಅನೇಕ ಸಾಕುಪ್ರಾಣಿಗಳಿಗೆ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಇದು ಅವುಗಳಲ್ಲಿ ಅತಿಸಾರ ಮತ್ತು ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು.

ಹಸಿ ಮಾಂಸ

ಬೇಯಿಸಿದ ಮೂಳೆಗಳು ಪ್ರಾಣಿಗಳ ಗಂಟಲು ಅಥವಾ ಹೊಟ್ಟೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯವಿರುತ್ತದೆ. ಹಾಗೆಯೇ ಹಸಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳು ಅವುಗಳಿಗೆ ಸೋಂಕು ಉಂಟುಮಾಡಬಹುದು.

ಚಾಕೊಲೇಟ್ ಮತ್ತು ಕೆಫೀನ್

ಚಾಕೊಲೇಟ್‌ನಲ್ಲಿರುವ 'ಥಿಯೋಬ್ರೊಮೈನ್' ಎಂಬ ಅಂಶವು ನಾಯಿ ಮತ್ತು ಬೆಕ್ಕುಗಳಿಗೆ ಅತ್ಯಂತ ಅಪಾಯಕಾರಿ. ಇದು ಅವುಗಳ ಹೃದಯಬಡಿತವನ್ನು ಏರುಪೇರು ಮಾಡುವುದಲ್ಲದೆ, ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಒಣದ್ರಾಕ್ಷಿ

ದ್ರಾಕ್ಷಿಯು ನಾಯಿಗಳಲ್ಲಿ ಕಿಡ್ನಿ ವೈಫಲ್ಯಕ್ಕೆ (Kidney Failure) ಕಾರಣವಾಗಬಹುದು. ಸಣ್ಣ ಪ್ರಮಾಣದ ದ್ರಾಕ್ಷಿ ಸೇವನೆಯೂ ಅವುಗಳಲ್ಲಿ ವಾಂತಿ ಮತ್ತು ನಿಶ್ಯಕ್ತಿಯನ್ನು ಉಂಟುಮಾಡುತ್ತದೆ.

ನಾಯಿ-ಬೆಕ್ಕುಗಳಿಗೆ ಪ್ರಾಣಾಪಾಯ ತರಬಹುದು ಈ ಆಹಾರಗಳು

ನಿಮ್ಮ ಸಾಕುಪ್ರಾಣಿಯು ಆಕಸ್ಮಿಕವಾಗಿ ಇವುಗಳನ್ನು ಸೇವಿಸಿ, ಅತಿಯಾದ ಜೊಲ್ಲು ಸುರಿಸುವುದು, ವಾಂತಿ ಅಥವಾ ವಿಚಿತ್ರವಾಗಿ ವರ್ತಿಸುತ್ತಿದ್ದರೆ ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ.