ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ!
ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ!
ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ಮದುವೆಯ ಸಂಭ್ರಮದಲ್ಲಿರುವ ಹುಡುಗಿಗೆ ಮುಖದ ಮೇಲಿನ ನಗು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆರೋಗ್ಯವು ಮುಖ್ಯವಾಗಿರುತ್ತದೆ. ದೇಹಕ್ಕೆ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಅಗತ್ಯವಾಗಿದೆ. ಚರ್ಮಕ್ಕೆ ನೈಸರ್ಗಿಕ ಹೊಳಪು (Natural Glow) ಬರಬೇಕಾದರೆ ಮದುವೆಗೆ ಕನಿಷ್ಠ 1 ರಿಂದ 2 ತಿಂಗಳು ಮುಂಚಿತವಾಗಿ ಈ ಆಹಾರ ಕ್ರಮವನ್ನು ಪಾಲಿಸಿಸಕ್ಕರೆ ಮತ್ತು ಎಣ್ಣೆ ಪದಾರ್ಥಗಳಿಗೆ ಗುಡ್ ಬೈ
ಸಕ್ಕರೆ ಮತ್ತು ಹೆಚ್ಚು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮುಖದ ಮೇಲೆ ಮೊಡವೆ ಮೂಡಲು ಕಾರಣವಾಗುತ್ತವೆ. ಇವುಗಳನ್ನು ಮದುವೆಯವರೆಗೆ ದೂರವಿಡಿಬೀಟ್ರೂಟ್ ಜ್ಯೂಸ್
ಇದು ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಿಸುತ್ತದೆ. ವಾರಕ್ಕೆ ಮೂರು ಬಾರಿಯಾದರೂ ಬೀಟ್‌ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಕುಡಿಯುವುದು 'ಪಿಂಕ್ ಗ್ಲೋ' ನೀಡುತ್ತದೆ.ಡ್ರೈ ಫ್ರೂಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!
ದಿನಕ್ಕೆ 4 ನೆನೆಸಿದ ಬಾದಾಮಿ ಮತ್ತು 2 ವಾಲ್‌ನಟ್ಸ್ (Walnuts) ಸೇವಿಸಿ. ಇದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಕೂದಲಿನ ಆರೋಗ್ಯಕ್ಕೆ ಮತ್ತು ಚರ್ಮದ ನಯಕ್ಕೆ ಬಹಳ ಉತ್ತಮ.ತರಕಾರಿ ಸೇವನೆ!
ಪಾಲಕ್, ಮೆಂತೆ ಮುಂತಾದ ತರಕಾರಿಗಳಲ್ಲಿ ಕಬ್ಬಿಣದ ಅಂಶ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿರುತ್ತವೆ. ಇದು ರಕ್ತಹೀನತೆಯನ್ನು ತಡೆದು ಮುಖಕ್ಕೆ ಕಾಂತಿ ನೀಡುತ್ತದೆದಿನಕ್ಕೆ ಒಂದು ಸೇಬು ಸೇವಿಸಿ!
ದಿನಕ್ಕೆ ಒಂದು ಸೇಬು ಅಥವಾ ದಾಳಿಂಬೆ ಸೇವಿಸಿ. ಕಿತ್ತಳೆ ಮತ್ತು ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮದ ಕಾಲಜನ್ ಹೆಚ್ಚಿಸಿ ಮುಖ ಸುಕ್ಕಾಗದಂತೆ ತಡೆಯುತ್ತದೆ