ಆಹಾರದ ಬಗ್ಗೆ ಇರಲಿ ಎಚ್ಚರ 
ಫೋಟೋ ಗ್ಯಾಲರಿ

ಮೈಕೊರೆಯುವ ಚಳಿಗಾಲದಲ್ಲಿ ಇವುಗಳನ್ನು ತಿನ್ಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ... Winter Season

ರಮೇಶ್​ ಕುಮಾರ್​​ ಬಿ ಎಡಮೋಳೆ

ಆಹಾರದ ಬಗ್ಗೆ ಇರಲಿ ಎಚ್ಚರ

ಚಳಿಗಾಲದಲ್ಲಿ ದೇಹದ ಉಷ್ಣತೆ ಕಾಯ್ದುಕೊಳ್ಳಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರದ ಬಗ್ಗೆ ಎಚ್ಚರ ವಹಿಸಬೇಕು. ಕೆಲ ಆಹಾರಗಳನ್ನು ತಿನ್ನುವುದರಿಂದ ಕೆಮ್ಮು, ಅಲರ್ಜಿ ಹಾಗೂ ಜೀರ್ಣ ಸಮಸ್ಯೆಗಳು ಹೆಚ್ಚಾಗಬಹುದು.

ಯಾವುದನ್ನು ತಿನ್ನಬಾರದು?

ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ತಪ್ಪಿಸಬೇಕಾದ 10 ಆಹಾರಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ತಂಪಾಗಿಸುವ ಹಣ್ಣುಗಳು

ಕರಬೂಜ, ಕಿತ್ತಲೆ, ಸೀಬೆ ಹಣ್ಣು ಸೇರಿದಂತೆ ಕೆಲವು ಹಣ್ಣುಗಳು ದೇಹವನ್ನು ತಂಪಾಗಿಸುತ್ತವೆ. ಹಾಗಾಗಿ, ಮಿತವಾಗಿ ತಿಂದರೆ ತೊಂದರೆ ಇಲ್ಲ. ಹೆಚ್ಚೆಚ್ಚು ತಿಂದರೆ ಸಮಸ್ಯೆ ಉಂಟಾಗಲಿವೆ.

ತಂಪಾದ ಪಾನೀಯಗಳು

ಫ್ರಿಡ್ಜ್‌ನಲ್ಲಿಟ್ಟ ನೀರು, ಕೋಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್, ಮಿಲ್ಕ್ ಶೇಕ್ ಮುಂತಾದ ತಂಪಾದ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಇದರಿಂದ ಗಂಟಲು ನೋವು ಹಾಗೂ ಕೆಮ್ಮು ಬರುವ ಸಾಧ್ಯತೆ ಹೆಚ್ಚಿದೆ.

ಅನ್ನದಿಂದ ಮಾಡಿದ ತಿಂಡಿಗಳು

ಇಡ್ಲಿ, ದೋಸೆ ಹಾಗೂ ಉಪ್ಪಿಟ್ಟನ್ನು ಹೆಚ್ಚೆಚ್ಚು ಸೇವಿಸಬೇಡಿ. ಇವು ಚಳಿಗಾಲದಲ್ಲಿ ನಿಮ್ಮ ದೇಹದಲ್ಲಿ ಕಫವನ್ನು ಹೆಚ್ಚಿಸುತ್ತವೆ.

ಹೆಚ್ಚು ತೈಲಯುಕ್ತ ಆಹಾರ

ಚಳಿಗಾಲದಲ್ಲಿ ಡೀಪ್ ಫ್ರೈ ಮಾಡಿದ ಪಕೋಡ, ಚಿಪ್ಸ್, ಫ್ರೆಂಚ್ ಫ್ರೈಸ್​ಗಳನ್ನು ಸೇವಿಸಬೇಡಿ. ಇವುಗಳಿಂದ ಜೀರ್ಣಕ್ರಿಯೆ ಮಂದಗತಿಯಾಗಿ, ತೂಕ ಹೆಚ್ಚಾಗುವ ಸಾಧ್ಯತೆ ಇದೆ.

ಮೊಸರು

ಚಳಿಗಾಲದಲ್ಲಿ ರಾತ್ರಿ ಊಟದಲ್ಲಿ ಮೊಸರು ತಿನ್ನುವುದನ್ನು ಪೂರ್ತಿ ತಪ್ಪಿಸಿ. ಸೇವಿಸಿದರೆ ಕಫದ ಸಮಸ್ಯೆ ಕಾಡುತ್ತದೆ.

ಹಸಿ ಆಹಾರ ಅಥವಾ ಸಲಾಡ್

ಚಳಿಗಾಲದಲ್ಲಿ ಯಾವುದೇ ಕಾರಣಕ್ಕೂ ಹಸಿ ತರಕಾರಿಗಳನ್ನು ಹೆಚ್ಚು ತಿನ್ನಬೇಡಿ. ಇವು ದೇಹದಲ್ಲಿ ತಂಪು ಹೆಚ್ಚಿಸುತ್ತದೆ.

ಅತಿ ಮಸಾಲೆಯುಕ್ತ ಆಹಾರ

ಚಾಟ್, ಪಾನಿಪೂರಿ, ಅತಿ ಖಾರದ ಕುರ್ಮಾ/ಗ್ರೇವಿಯನ್ನು ಸೇವಿಸಬೇಡಿ. ಇದರಿಂದ ಗಂಟಲು ಉರಿ, ಕೆಮ್ಮು ಬರುತ್ತದೆ.

ಹೆಚ್ಚು ಸಿಹಿ ತಿಂಡಿಗಳು

ಗುಲಾಬ್ ಜಾಮೂನ್, ಜಿಲೇಬಿ, ಐಸ್‌ಕ್ರೀಮ್ ಸೇರಿದಂತೆ ಸಿಹಿ ತಿನಿಸುಗಳಿಂದ ದೂರವಿರಿ. ಏಕೆಂದರೆ, ಇವು ನಿಮ್ಮ ತೂಕ ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಕಾಫಿ/ಚಹಾ ಹೆಚ್ಚು

ದಿನಕ್ಕೆ 4 ರಿಂದ 5 ಕಪ್​ಗಿಂತ ಹೆಚ್ಚು ಕಾಫಿ, ಟೀ ಕುಡಿಯಬೇಡಿ. ಮಿತಿ ಮೀರಿ ಕುಡಿದರೆ, ನಿದ್ರೆ ತೊಂದರೆ, ಒಣ ಗಂಟಲು, ಡಿಹೈಡ್ರೇಶನ್ ಆಗುತ್ತದೆ.

ಬೀದಿ ಆಹಾರ

ಚಾಟ್ ಮಸಾಲ, ಪಾನಿಪೂರಿ, ಭೇಲ್‌ಪೂರಿ ಸೇರಿದಂತೆ ಬೀದಿ ಬದಿಯಲ್ಲಿ ಸಿಗುವ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಏಕೆಂದರೆ, ಚಳಿಗಾಲದಲ್ಲಿ ಅವುಗಳಿಂದ ಸೋಂಕು ಬೇಗ ಹರಡುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿ.

ಗಮನಿಸಿ

ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.