ರಾತ್ರಿ ವೇಳೆ ಕೆಲವು ಕೆಲಸಗಳನ್ನು ಮಾಡಬಾರದು!
ರಾತ್ರಿ ವೇಳೆ ಕೆಲವು ಕೆಲಸಗಳನ್ನು ಮಾಡಬಾರದು!
ಜ್ಯೋತಿಷ್ಯದ ಪ್ರಕಾರ, ನಾವು ದಿನವಿಡೀ ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳು ನಮ್ಮ ಜೀವನದ ಹಣೆಬರಹದ ಮೇಲೆ ಪರಿಣಾಮ ಬೀರುತ್ತವೆ. ಮಹಿಳೆಯರು ರಾತ್ರಿ ವೇಳೆ ಕೆಲವು ಕೆಲಸಗಳನ್ನು ಮಾಡಬಾರದು. ಇದು ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ..ರಾತ್ರಿಯಲ್ಲಿ ಕೂದಲು ಕಟ್ಟಿಕೊಂಡು ಮಲಗಬಾರದು!
ಮಹಿಳೆಯರು ರಾತ್ರಿಯಲ್ಲಿ ಕೂದಲು ಕಟ್ಟಿಕೊಂಡು ಮಲಗಬಾರದು. ವಿಶೇಷವಾಗಿ ನೀವು ಒಬ್ಬಂಟಿಯಾಗಿ ಮಲಗುತ್ತಿದ್ದರೆ, ಕೂದಲು ಕಟ್ಟಿಕೊಂಡು ಮಲಗಬೇಡಿ. ಇದು ನಕಾರಾತ್ಮಕ ಶಕ್ತಿ ಅಥವಾ ದುಷ್ಟಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.ರಾತ್ರಿಯಲ್ಲಿ ಸುಗಂಧ ದ್ರವ್ಯವನ್ನು ಹಚ್ಚಬಾರದು.!
ಮಹಿಳೆಯರು ರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ಅಥವಾ ಸುಗಂಧ ದ್ರವ್ಯವನ್ನು ಹಚ್ಚಿಕೊಂಡು ಮಲಗುವುದನ್ನು ತಪ್ಪಿಸಬೇಕು. ಸುಗಂಧ ದ್ರವ್ಯದ ವಾಸನೆಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಮಹಿಳೆಯರು ರಾತ್ರಿಯಲ್ಲಿ ತಲೆ ಬಾಚ ಬಾರದು!
ಮಹಿಳೆಯರು ರಾತ್ರಿಯಲ್ಲಿ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಂಡು ಮಲಗುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದುನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ!
ಮಹಿಳೆಯರು ರಾತ್ರಿಯಲ್ಲಿ ಜಗಳ ಅಥವಾ ವಾದಗಳನ್ನು ತಪ್ಪಿಸಬೇಕು. ರಾತ್ರಿಯಲ್ಲಿ ಜಗಳಗಳು ನಿಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಜೊತೆಗೆ ಮಾನಸಿಕ ಅಶಾಂತಿಯು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.