ಈರುಳ್ಳಿ 
ಫೋಟೋ ಗ್ಯಾಲರಿ

ಹೆಚ್ಚಿಟ್ಟ ಈರುಳ್ಳಿ ಫ್ರಿಡ್ಜ್‌ನಲ್ಲಿಟ್ಟರೆ ಏನಾಗುತ್ತೆ ಗೊತ್ತಾ?

ಭಾನುಪ್ರಿಯ ಡಿ.ಕೆ

ಈರುಳ್ಳಿ

ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಟ್ಟು ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಈ ರೀತಿ ಮಾಡುವುದರಿಂದ ಕೆಲವೊಂದು ಹಾನಿಯನ್ನು ಅನುಭವಿಸಬೇಕಾಗುತ್ತದೆ.

ಬ್ಯಾಕ್ಟೀರಿಯಾಗಳ ಆವಾಸಸ್ಥಾನ

ಈರುಳ್ಳಿಗೆ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೀರಿಕೊಳ್ಳುವ ಗುಣವಿದೆ. ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಟ್ಟಾಗ, ಅದು ಅಲ್ಲಿನ ತೇವಾಂಶ ಮತ್ತು ಸೂಕ್ಷ್ಮಾಣುಜೀವಿಗಳನ್ನು ಬೇಗನೆ ಆಕರ್ಷಿಸಿ ಕಲುಷಿತಗೊಳ್ಳುತ್ತದೆ.

ವಿಷಾಹಾರ ಅಪಾಯ

ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಪೀಡಿತ ಈರುಳ್ಳಿಯನ್ನು ಸೇವಿಸುವುದರಿಂದ ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಫುಡ್ ಪಾಯ್ಸನಿಂಗ್‌ನಂತಹ ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಪೋಷಕಾಂಶಗಳ ನಷ್ಟ

ಫ್ರಿಡ್ಜ್‌ನಲ್ಲಿನ ಅತಿಯಾದ ತಂಪು ವಾತಾವರಣವು ಈರುಳ್ಳಿಯಲ್ಲಿರುವ ನೈಸರ್ಗಿಕ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಇದರಿಂದ ಈರುಳ್ಳಿ ತನ್ನಲ್ಲಿರುವ ಜೀವಸತ್ವ ಹಾಗೂ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.

ರುಚಿ ಮತ್ತು ವಿನ್ಯಾಸ ಬದಲಾವಣೆ

ತೇವಾಂಶದ ಕಾರಣದಿಂದ ಫ್ರಿಡ್ಜ್‌ನಲ್ಲಿಟ್ಟ ಈರುಳ್ಳಿ ಬೇಗನೆ ಮೆತ್ತಗಾಗುತ್ತದೆ ಮತ್ತು ಕ್ರಿಸ್ಪಿ ಗುಣವನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಅದರ ಘಾಟು ಮತ್ತು ನೈಜ ರುಚಿ ಸಂಪೂರ್ಣವಾಗಿ ಮಾಯವಾಗುತ್ತದೆ.

ಇಡೀ ಫ್ರಿಡ್ಜ್ ದುರ್ವಾಸನೆ

ಕತ್ತರಿಸಿದ ಈರುಳ್ಳಿ ಫ್ರಿಡ್ಜ್‌ನಲ್ಲಿ ಗ್ಯಾಸ್ ಬಿಡುಗಡೆ ಮಾಡುವುದರಿಂದ ಇಡೀ ಫ್ರಿಡ್ಜ್ ದುರ್ವಾಸನೆ ಆವರಿಸುತ್ತದೆ. ಇದು ಅಲ್ಲಿಟ್ಟಿರುವ ಇತರ ಆಹಾರ ಪದಾರ್ಥಗಳ ರುಚಿಯನ್ನೂ ಹಾಳು ಮಾಡುತ್ತದೆ.