ತುಪ್ಪ 
ಫೋಟೋ ಗ್ಯಾಲರಿ

ಪ್ರತಿದಿನ ತುಪ್ಪ ತಿಂದ್ರೆ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? Ghee Benefits

ಭಾನುಪ್ರಿಯ ಡಿ.ಕೆ

ತುಪ್ಪ

ಪ್ರತಿದಿನ ನಿಯಮಿತವಾಗಿ ಒಂದು ಚಮಚ ಶುದ್ಧ ಹಸುವಿನ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಲಾಭದಾಯಕ. ಆಯುರ್ವೇದದಲ್ಲೂ ತುಪ್ಪಕ್ಕೆ ವಿಶೇಷ ಸ್ಥಾನವಿದ್ದು, ದೇಹದ ಸಮಗ್ರ ಆರೋಗ್ಯವನ್ನು ಹೆಚ್ಚಿಸಲು ಇದು ಸಹಕಾರಿ.

ಜೀರ್ಣಕ್ರಿಯೆ ವೃದ್ಧಿ

ತುಪ್ಪದಲ್ಲಿರುವ ಬ್ಯುಟರಿಕ್ ಆಸಿಡ್ ಜೀರ್ಣಾಂಗವ್ಯೂಹವನ್ನು ಆರೋಗ್ಯವಾಗಿಡುತ್ತದೆ. ಇದು ಆಹಾರ ಬೇಗನೆ ಜೀರ್ಣವಾಗಲು ಮತ್ತು ಮಲಬದ್ಧತೆ ಸಮಸ್ಯೆಯನ್ನು ದೂರವಿಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ

ತುಪ್ಪದಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಪ್ರಚುರವಾಗಿದ್ದು, ಇವು ದೇಹದ ಆಂಟಿಆಕ್ಸಿಡೆಂಟ್ ಮಟ್ಟವನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಮೂಳೆ ಹಾಗೂ ಕೀಲುಗಳ ಆರೋಗ್ಯ

ತುಪ್ಪವು ಕೀಲುಗಳಿಗೆ ಲೂಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ ಮತ್ತು ಮೂಳೆಗಳು ಗಟ್ಟಿಯಾಗುತ್ತವೆ.

ಹೊಳೆಯುವ ಚರ್ಮ ಹಾಗೂ ಕೂದಲು

ಇದರಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ನೈಸರ್ಗಿಕ ತೇವಾಂಶವನ್ನು ನೀಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತವೆ ಹಾಗೂ ಕೂದಲು ಉದುರುವುದನ್ನು ತಡೆಯುತ್ತವೆ.

ಮೆದುಳಿನ ಚುರುಕುತನ

ತುಪ್ಪವು ಮೆದುಳಿನ ನರಗಳನ್ನು ಉತ್ತೇಜಿಸಿ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ.