ಬಿಪಿ ನಿಯಂತ್ರಣ 
ಫೋಟೋ ಗ್ಯಾಲರಿ

ಈ ಒಂದೇ ಒಂದು ತರಕಾರಿ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ! |Raw Onion

Vijayavan

ಬಿಪಿ ನಿಯಂತ್ರಣ

ಈರುಳ್ಳಿಯು ಕ್ವೆರ್ಸೆಟಿನ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವುದರೊಂದಿಗೆ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು (ಬಿಪಿ)ನಿಯಂತ್ರಿಸುತ್ತದೆ.

ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ತಡೆ

ಹಸಿ ಈರುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಕ್ಯಾನ್ಸರ್ ಅನ್ನು ತಡೆಯುತ್ತದೆ. ಇದರಲ್ಲಿರುವ ಕ್ವೆರ್ಸೆಟಿನ್, ಪ್ಲೇವನಾಯ್, ಅಲಿಸಿನ್ ನಂತಹ ಸಲ್ಟರ್ ಸಂಯುಕ್ತಗಳು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ಸೌಂದರ್ಯಕ್ಕೂ ಸೈ

ಹಸಿ ಈರುಳ್ಳಿಯಲ್ಲಿರುವ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್, ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಸಿರು ಈರುಳ್ಳಿಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮತ್ತು ಕಲೆಗಳು ಬಹಳ ಸುಲಭವಾಗಿ ಮಾಯವಾಗುತ್ತದೆ ಮತ್ತು ತಲೆಗೆ ಹಚ್ಚಿಕೊಳ್ಳುವುದರಿಂದ ಹೊಸ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.