ಸಣ್ಣದಾಗಿ ಕಂಡರು ಒಳಗಿದೆ ಅದ್ಭುತ
ಸಣ್ಣದಾಗಿ ಕಂಡರು ಒಳಗಿದೆ ಅದ್ಭುತ
ಕಡಲೆಕಾಯಿ ಬೀಜ ನೋಡಲು ಸಣ್ಣದಾಗಿ ಕಂಡರು ಕೂಡ ಅದರಲ್ಲಿ ಪೋಷಕಾಂಶಗಳು ತುಂಬಿ ತುಳುಕುತ್ತವೆ. ನಿಯಮಿತವಾಗಿ ತಿನ್ನುವುದರಿಂದ ಏನೆಲ್ಲ ಲಾಭ ಪಡೆಯಬಹುದು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.ಹೃದಯಕ್ಕೆ ಒಳ್ಳೆಯದು
ಕಡಲೆಕಾಯಿಯಲ್ಲಿ ಮೋನೋಅನ್‌ಸ್ಯಾಚುರೇಟೆಡ್ ಫ್ಯಾಟ್ (MUFA), ವಿಟಮಿನ್ ಇ, ಮೆಗ್ನಿಶಿಂ ಮತ್ತು ರೆಸ್ವೆರಾಟ್ರಾಲ್ ಇದ್ದು, ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗದ ಅಪಾಯ ಶೇ. 25 ರಿಂದ 30 ರಷ್ಟು ಕಡಿಮೆಯಾಗುತ್ತದೆ.ತೂಕ ನಿಯಂತ್ರಣ
ಹೆಚ್ಚು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುವ ಕಡಲೆಕಾಯಿಯನ್ನು ತಿನ್ನುವುದರಿಂದ ಬೇಗ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಅಲ್ಲದೆ, ಬೇಗನೇ ಹಸಿವಾಗುವುದಿಲ್ಲ. ಇದರಿಂದ ಇತರೆ ತಿಂಡಿಗಳ ಮೇಲಿನ ಆಸೆ ಕಡಿಮೆಯಾಗಿ ತೂಕ ಇಳಿಸಲು ಸಹಕಾರಿಯಾಗಿದೆ.ಡಯಾಬಿಟೀಸ್ ನಿಯಂತ್ರಣ
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯನ್ನು ತಡೆಯುತ್ತದೆ. ನಿಯಮಿತವಾಗಿ ಸೇವಿಸಿದರೆ ಟೈಪ್-2 ಡಯಾಬಿಟೀಸ್ ಬರುವ ಅಪಾಯ ಶೇ. 21 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಹೇಳಿವೆ.ಮೆದುಳಿನ ಆರೋಗ್ಯ
ವಿಟಮಿನ್ ಇ, ನಿಯಾಸಿನ್ (B3) ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಆಲ್ಝೈಮರ್ ಹಾಗೂ ಪಾರ್ಕಿನ್‌ಸನ್ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಚರ್ಮ ಮತ್ತು ಕೂದಲಿಗೆ ಒಳ್ಳೆಯದು
ಕಡಲೆಕಾಯಿಯಲ್ಲಿ ವಿಟಮಿನ್ ಇ ಮತ್ತು ಬಯೋಟಿನ್ ಇರುವುದರಿಂದ ಚರ್ಮದ ಗ್ಲೋ ಹೆಚ್ಚಿಸುತ್ತದೆ. ಇದಿಷ್ಟೇ ಅಲ್ಲದೆ, ಕೂದಲು ಉದುರುವುದು ತುಂಬಾ ಕಡಿಮೆಯಾಗುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಳ
ಬಡವರ ಬಾದಾಮಿ ಕಡಲೆಕಾಯಿಯಲ್ಲಿ ಜಿಂಕ್, ಸೆಲೆನಿಯಂ, ವಿಟಮಿನ್ B6 ಇದ್ದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ಆಗಾಗ ಅನಾರೋಗ್ಯಕ್ಕೀಡಾಗುವುದು ತಪ್ಪುತ್ತದೆ.ಮೂಳೆಗಳ ಬಲ
ಕಡಲೆಕಾಯಿಯಲ್ಲಿ ಮೆಗ್ನಿಶಿಯಂ, ಫಾಸ್ಫರಸ್, ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಸಾಂದ್ರತೆಯನ್ನು ಕಾಯ್ದುಕೊಂಡು ಆಸ್ಟಿಯೊಪೊರೋಸಿಸ್ ಕಾಯಿಲೆಯನ್ನು ತಡೆಯುತ್ತದೆ.ರಕ್ತಹೀನತೆ ತಡೆಗಟ್ಟುತ್ತದೆ
ರುಚಿಕರವಾದ ಕಡಲೆಕಾಯಿಯಲ್ಲಿ ಕಬ್ಬಿಣ ಮತ್ತು ಫೋಲೇಟ್ ಅಂಶ ಸಮೃದ್ದಾಗಿದ್ದು, ಅನಾರೋಗ್ಯಕ್ಕೀಡಾದ ಮಹಿಳೆಯರಿಗೆ ಅಥವಾ ಕಬ್ಬಿಣಾಂಶ ಕೊರತೆ ಇರುವವರಿಗೆ ಬಹಳ ಒಳ್ಳೆಯದು.ಕ್ಯಾನ್ಸರ್ ಅಪಾಯ ಕಡಿಮೆ
ಆ್ಯಂಟಿಆಕ್ಸಿಡೆಂಟ್‌ಗಳಾದ ರೆಸ್ವೆರಾಟ್ರಾಲ್, P-ಕೌಮರಿಕ್ ಆಮ್ಲ ಮತ್ತು ಫೈಟೋಸ್ಟೆರಾಲ್‌ಗಳು ಕೆಲವು ಬಗೆಯ ಕ್ಯಾನ್ಸರ್ (ವಿಶೇಷವಾಗಿ ಕರುಳು ಮತ್ತು ಸ್ತನ ಕ್ಯಾನ್ಸರ್) ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಪ್ರಾಥಮಿಕ ಅಧ್ಯಯನಗಳು ತೋರಿಸಿವೆ.ಗಮನಿಸಿ
ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.