ರುಚಿಯಾದ ಆಹಾರವಷ್ಟೇ ಅಲ್ಲ, ಇದು ಅದ್ಭುತವಾದ ಆರೋಗ್ಯ ಪ್ರಯೋಜನ 
ಫೋಟೋ ಗ್ಯಾಲರಿ

ಮಟನ್ ಕಾಲ್​​ ಸೂಪ್ ಕುಡಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? Mutton Leg Soup

ಸವಿನಾ ನಾಯ್ಕ

ರುಚಿಯಾದ ಆಹಾರವಷ್ಟೇ ಅಲ್ಲ, ಇದು ಅದ್ಭುತವಾದ ಆರೋಗ್ಯ ಪ್ರಯೋಜನ

ಬೆಂಗಳೂರು: ( Mutton Leg Soup) ಮಟನ್ ಕಾಲು ಸೂಪ್ ಅಂದ್ರೆ ಕುರಿ ಅಥವಾ ಮೇಕೆ ಕಾಲಿನಿಂದ ತಯಾರಿಸಿದ ಒಂದು ಬಗೆಯ ಸೂಪ್. ಈ ಸೂಪ್ ಕೇವಲ ರುಚಿಯಾದ ಆಹಾರವಷ್ಟೇ ಅಲ್ಲ, ಇದು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಂದು ನೈಸರ್ಗಿಕ ಔಷಧಿಯಂತೆಯೇ ಕೆಲಸ ಮಾಡುತ್ತದೆ.

ಮಟನ್ ಸೂಪ್​​ನಲ್ಲಿ​​ ಪ್ರೋಟೀನ್​ಗಳು!

ಮಟನ್ ಸೂಪ್​​ನಲ್ಲಿ​​ ಪ್ರೋಟೀನ್​ಗಳು, ಕಾಲಜನ್, ವಿಟಮಿನ್ ಬಿ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವುಗಳಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.

ಮೂಳೆಗಳ ಆರೋಗ್ಯ

ಮೇಕೆ ಕಾಲಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಅಧಿಕವಾಗಿರುತ್ತದೆ. ಇದು ಮೂಳೆಗಳನ್ನು ಬಲಪಡಿಸಲು ಮತ್ತು ಮೂಳೆ ಸವೆತವನ್ನು ತಡೆಯಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ!

ಮೇಕೆ ಕಾಲಿನ ಸೂಪ್‌ನಲ್ಲಿ ಅಮೈನೋ ಆಸಿಡ್‌ಗಳು ಸಮೃದ್ಧವಾಗಿವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳಿಂದ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲಿನ ಸೌಂದರ್ಯ

ಮೇಕೆ ಕಾಲಿನ ಸೂಪ್‌ನಲ್ಲಿರುವ ಕೊಲಾಜೆನ್ ಅಂಶವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುತ್ತದೆ, ಅಕಾಲಿಕ ಸುಕ್ಕುಗಳನ್ನು ತಡೆಯುತ್ತದೆ ಮತ್ತು ಕೂದಲು ಹಾಗೂ ಉಗುರುಗಳು ಗಟ್ಟಿಯಾಗಿ ಬೆಳೆಯಲು ನೆರವಾಗುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಇದರಲ್ಲಿರುವ ಜಿಲೆಟಿನ್ ಅಂಶವು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಜೀರ್ಣಾಂಗವ್ಯೂಹದ ಉರಿಯೂತವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಕೂಡ ಪರೋಕ್ಷವಾಗಿ ನೆರವಾಗುತ್ತದೆ.

ಗಮನಿಸಿ

ಈ ಸೂಪ್‌ನಲ್ಲಿ ಕೊಬ್ಬಿನಂಶ ಸ್ವಲ್ಪ ಹೆಚ್ಚಿರುವುದರಿಂದ, ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆದು ಮಿತವಾಗಿ ಸೇವಿಸುವುದು ಉತ್ತಮವಾಗಿದೆ.