ಹಾವುಗಳನ್ನು ಕಂಡರೆ ಸಾಕು.... 
ಫೋಟೋ ಗ್ಯಾಲರಿ

ಹಾವು ಕಂಡ್ರೆ ಸಾಕು… ಚೆಂದ ಕಾಣುವ ‘ಸೆಕ್ರೆಟರಿ ಬರ್ಡ್’​ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು | ​Secretary Bird

ಮೋಹನ್​ ಶೆಟ್ಟಿ

ಹಾವುಗಳನ್ನು ಕಂಡರೆ ಸಾಕು....

ಬೇಟೆಯನ್ನು ಬೆಂಬಿಡದೆ ದಾಳಿ ನಡೆಸುವ ಈ ಹಕ್ಕಿಯೂ ಹಾವುಗಳನ್ನು ಕಂಡರೆ ಸಾಕು ತನ್ನ ಉಗುರುಗಳಿಂದ ಅವುಗಳನ್ನು ಕುಕ್ಕಿ ಕೊಲ್ಲುತ್ತವೆ. ಅದರಲ್ಲೂ ಅತ್ಯಂತ ವಿಷಕಾರಿ ಹಾವುಗಳು ಅಟ್ಯಾಕ್​ ಮಾಡಲು ಯತ್ನಿಸಿದರೆ, ಅವನ್ನು ಅತ್ಯಂತ ಕ್ರೂರವಾಗಿ ಕೊಂದು ತಿನ್ನುತ್ತದೆ.

‘ಸೆಕ್ರೆಟರಿ ಬರ್ಡ್’​ ಒಂದು ವಿಶಿಷ್ಟ

ಮೇಲ್ನೋಟಕ್ಕೆ ಸುಂದರವಾಗಿರುವ ಈ ಹಕ್ಕಿಯನ್ನು ‘ಸೆಕ್ರೆಟರಿ ಬರ್ಡ್’​ ಎಂದು ಕರೆಯಲಾಗುತ್ತದೆ. ಇತರೆ ಪ್ರಾಣಿಗಳಿಗಿಂತ ಹಾವುಗಳು ಇದರ ನೆಚ್ಚಿನ ಬೇಟೆಯಾಗಿದೆ. ವಾಸ್ತವವಾಗಿ, ಈ ಹಕ್ಕಿ ಅತ್ಯಂತ ವಿಷಕಾರಿ ಹಾವುಗಳನ್ನು ಕೊಂದು, ನಿಮಿಷಗಳೊಳಗೆ ತಿಂದು ಮುಗಿಸುತ್ತದೆ.

ಆಫ್ರಿಕಾದಲ್ಲಿ ಮೊದಲು ಕಂಡುಬಂದ ಹಕ್ಕಿ

ಈ ಹಕ್ಕಿ ತನ್ನ ಹೆಚ್ಚಿನ ಸಮಯವನ್ನು ನೆಲದ ಮೇಲೆ ಕಳೆಯುತ್ತದೆ. ನೋಡಲು ಆಕರ್ಷಕ ಮೈಬಣ್ಣ ಹೊಂದಿರುವ ಸೆಕ್ರೆಟರಿ ಬರ್ಡ್​, ಸುಂದರವಾಗಿ ಕಂಡರೂ ಅತ್ಯಂತ ಅಪಾಯಕಾರಿ. ಅದಕ್ಕಾಗಿಯೇ ಇದನ್ನು ‘ದಿ ಆರ್ಚರ್ ಆಫ್ ಸ್ನೇಕ್ಸ್​’ ಎಂದೂ ಆಂಗ್ಲ ಪದದಲ್ಲಿ ಕರೆಯುತ್ತಾರೆ.

ಐದು ಪಟ್ಟು ಬಲದಿಂದ ಒದೆಯುವ ಸಾಮರ್ಥ್ಯ

ಈ ಹಕ್ಕಿ ಹಾವುಗಳನ್ನು ಹಿಡಿಯಲು ತನ್ನ ತೀಕ್ಷ್ಣವಾದ, ಶಕ್ತಿಯುತ ಕಾಲುಗಳನ್ನು ಬಳಸುತ್ತದೆ. ತನ್ನ ದೇಹದ ತೂಕಕ್ಕಿಂತ ಐದು ಪಟ್ಟು ಬಲದಿಂದ ಒದೆಯುವ ಸಾಮರ್ಥ್ಯ ಹೊಂದಿದೆ. ಆ ಬಲ ಸುಮಾರು 195 ನ್ಯೂಟನ್‌ಗಳು ಎನ್ನಲಾಗಿದೆ.