ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ
ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ
ಇಂದಿನ ಜೀವನಶೈಲಿಯಲ್ಲಿ ಅನೇಕರು ಹಾಸಿಗೆಯ ಮೇಲೆ ಕುಳಿತು ಊಟ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಅದರಲ್ಲೂ ಟಿವಿ ಅಥವಾ ಮೊಬೈಲ್ ನೋಡುತ್ತಾ ಹಾಸಿಗೆಯ ಮೇಲೆ ಕುಳಿತು ತಿನ್ನುವುದು ಆರಾಮದಾಯಕ ಎನಿಸಬಹುದು. ಆದರೆ, ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ.ತೂಕ ಹೆಚ್ಚಾಗಲು ಕಾರಣವಾಗುತ್ತದೆ!
ಹಾಸಿಗೆಯ ಮೇಲೆ ಕುಳಿತಾಗ ಸಾಮಾನ್ಯವಾಗಿ ನಮ್ಮ ಗಮನ ಊಟಕ್ಕಿಂತ ಟಿವಿ ಅಥವಾ ಮೊಬೈಲ್ ಮೇಲೆ ಹೆಚ್ಚಿರುತ್ತದೆ. ಇದರಿಂದ ನಮಗೆ ಹಸಿವು ಎಷ್ಟಿದೆ ಮತ್ತು ಎಷ್ಟು ತಿನ್ನುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ತೂಕ ಹೆಚ್ಚಾಗಲು ಕಾರಣವಾಗುತ್ತದೆ.ನಿದ್ರೆಯ ಮೇಲೆ ಪ್ರಭಾವ
ನಿದ್ರೆ ಮಾಡುವ ಹಾಸಿಗೆಯ ಮೇಲೆಯೇ ಊಟ ಮಾಡಿದರೆ, ನಮ್ಮ ಮೆದುಳು ಹಾಸಿಗೆಯನ್ನು 'ನಿದ್ರಿಸುವ ಸ್ಥಳ' ಎಂದು ಗುರುತಿಸುವ ಬದಲು 'ಚಟುವಟಿಕೆಯ ಸ್ಥಳ' ಎಂದು ಭಾವಿಸಲು ಶುರು ಮಾಡುತ್ತದೆ. ಇದರಿಂದ ನಿದ್ರಾಹೀನತೆ ಉಂಟಾಗಬಹುದು.ಕ್ರಿಮಿ-ಕೀಟಗಳ ಕಾಟ
ಹಾಸಿಗೆಯ ಮೇಲೆ ಊಟ ಮಾಡುವಾಗ ಆಹಾರದ ಸಣ್ಣ ಕಣಗಳು ಅಥವಾ ಹನಿಗಳು ಬೆಡ್ ಶೀಟ್ ಮೇಲೆ ಬೀಳುವ ಸಾಧ್ಯತೆ ಇರುತ್ತದೆ. ಇರುವೆಗಳು ಮತ್ತು ಜಿರಳೆಗಳಂತಹ ಕೀಟಗಳನ್ನು ಆಕರ್ಷಿಸುತ್ತದೆ. ಅಲ್ಲದೆ, ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗಿ ಚರ್ಮದ ಸೋಂಕುಗಳು ಉಂಟಾಗಬಹುದು.ಈ ಅಭ್ಯಾಸ ರೂಢಿಸಿಕೊಳ್ಳಿ!
ಯಾವಾಗಲೂ ಕೆಳಗೆ ನೆಲದ ಮೇಲೆ ಅಥವಾ ಡೈನಿಂಗ್ ಟೇಬಲ್ ಮೇಲೆ ನೇರವಾಗಿ ಕುಳಿತು ಊಟ ಮಾಡಿ.
ಊಟ ಮಾಡುವಾಗ ಮೊಬೈಲ್ ಮತ್ತು ಟಿವಿಯಿಂದ ದೂರವಿರಿ.ಊಟ ಮಾಡಿದ ನಂತರ ಸ್ವಲ್ಪ ಹೊತ್ತು ಓಡಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.