ಫೋಟೋ ಗ್ಯಾಲರಿ

ಪ್ರವಾಸ​​ ಹೊರಟಾಗ ಓದುವ ಹುಚ್ಚಿದ್ಯಾ?; ಒಂದೇ ಗುಕ್ಕಿಗೆ ಓದಿ ಮುಗಿಸುವ ಈ ಕನ್ನಡದ ಪುಸ್ತಕಗಳನ್ನು ಕ್ಯಾರಿ ಮಾಡಿ

ವಿಜಯವಾಣಿ ಸುದ್ದಿ ಜಾಲ

ಬಂಗಾರದ ಕಡ್ಡಿ ಡೇರೆ ಹೂವು

ಯುವ ಬರಹಗಾರ ನವೀನ್​ ತೇಜಸ್ವಿ ಅವರ ಬಂಗಾರದ ಕಡ್ಡಿ ಡೇರೆ ಹೂವು ಕೃತಿಗೆ 2024ರ ಟೊಟೊ ಫಂಡ್ಸ್​​ ದಿ ಆರ್ಟ್​​ ಪ್ರಶಸ್ತಿ ದಕ್ಕಿದೆ. ಮಲೆನಾಡಿನಲ್ಲಿ ನಡೆಯುವ ನೈಜ ಘಟನೆಗಳನ್ನಾಧರಿಸಿ ಬರೆದಿರುವ ಕತೆಗಳೇ ಬಂಗಾರದ ಕಡ್ಡಿ ಡೇರೆ ಹೂವು. ಈ ಕೃತಿ ಒಟ್ಟು 10 ಕತೆಗಳನ್ನು ಹೊಂದಿದೆ.

ಪ್ರೇಮ ಪತ್ರದ ಆಫೀಸು ಮತ್ತು ಅವಳು

ಶಿವ ಕುಮಾರ್​ ಮಾವಲಿ ಅವರು ಬರೆದಿರುವ ಪ್ರೇಮ ಪತ್ರದ ಆಫೀಸು ಮತ್ತು ಅವಳು ಜನಪ್ರಿಯ ಕಥಾ ಸಂಕಲನ. ಇಂದಿನ ಕಾಲಘಟ್ಟದ ಪ್ರೀತಿ, ವಿರಹ ಮತ್ತು ಬದುಕಿನ ಸೂಕ್ಷ್ಮತೆ, ಅನಿರೀಕ್ಷಿತ ತಿರುವುಗಳೇ ಪುಸ್ತಕದ ಕಥಾ ವಸ್ತು. ಯಾವುದೇ ಕಷ್ಟದ ಪದಗಳಿಲ್ಲ. ಸರಳ ಭಾಷೆಯಲ್ಲಿರುವ ಈ ಕತೆಗಳನ್ನು ಪ್ರಯಾಣದ ಸಮಯದಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಒಂದೇ ಗುಕ್ಕಿಗೆ ಮುಗಿಸಬಹುದಾಗಿದೆ

ಬುದ್ಧನ ಕಿವಿ

ಪತ್ರಕರ್ತ, ಯುವ ಬರಹಗಾರ ದಯಾನಂದ ಅವರು ಬರೆದಿರುವ ಬುದ್ಧನ ಕಿವಿ ಸಹ ಪ್ರವಾಸ ಸಮಯದಲ್ಲಿ ಕ್ಯಾರಿ ಮಾಡಬಹುದಾದ ಬೆಸ್ಟ್​ ಚಾಯ್ಸ್​​​ ಪುಸ್ತಕ. ಆಧುನಿಕ ಜಗತ್ತಿನ ಒತ್ತಡ, ಪ್ರೀತಿ, ವಿರಹ ವೇದನೆ..ನಮ್ಮ ಸುತ್ತಮುತ್ತಲು ಈ ಘಟನೆ ನಡೆಯುತ್ತಿದೆ ಎನ್ನುವ ಕತೆಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಒಂದೇ ಬಗೆಯ ನಿರೂಪಣಾ ಶೈಲಿಗೆ ಅಂಟಿಕೊಳ್ಳದೆ, ಸಮಕಾಲೀನ ವಾಸ್ತವದ ಹಲವು ಮಗ್ಗುಲುಗಳನ್ನು ಭಿನ್ನ ವಸ್ತು ಮತ್ತು ತಂತ್ರಗಳ ಮೂಲಕ ಪ್ರಯೋಗಕ್ಕೆ ಒಡ್ಡಿದ್ದಾರೆ.

ಕತೆ ಡಬ್ಬಿ 

ನಟಿ, ನಿರ್ದೇಶಕಿ ಮತ್ತು ಬರಹಗಾರ್ತಿ ರಂಜನಿ ರಾಘವನ್​ ಬರೆದಿರುವ ಕತೆ ಡಬ್ಬಿ ಪುಸ್ತಕವು ಈಗಾಗಲೇ ಸಾಕಷ್ಟು ಓದುಗರನ್ನು ತಲುಪಿದೆ. ಪ್ರಯಾಣದ ಸಮಯದಲ್ಲಿ ಮೊಬೈಲ್ ಅವಾಯ್ಡ್ ಮಾಡಬೇಕು ಎಂದು ಬಯಸುವವರಿಗೆ ಇದೊಂದು ಒಳ್ಳೆಯ ಜೊತೆಗಾತಿಯಾಗುವ ಪುಸ್ತಕವಾಗಿದೆ. ಇಂದಿನ ಆಧುನಿಕ ಬದುಕು, ದೈನಂದಿನ ಜೀವನದ ನೈಜ ಘಟನೆ ಬಗ್ಗೆ ಪುಸ್ತಕ ಒಳಗೊಂಡಿದೆ.

ದೇವರು ಅರೆಸ್ಟ್ ಆದ

ಶಿವ ಕುಮಾರ್ ಮಾವಲಿ ಅವರು ಬರೆದಿರುವ ದೇವರು ಅರೆಸ್ಟ್ ಆದ ಪುಸ್ತಕವು ಓದಿಸಿಕೊಳ್ಳುವ ಪುಸ್ತಕ. ಎಲ್ಲಿಯೂ ಬೋರ್​ ಒಡಿಸುವುದಿಲ್ಲ. ಕನ್ನಡ ಪದಗಳನ್ನು ಕ್ಲಿಷ್ಟವಾಗಿ ಬಳಕೆ ಮಾಡದೆ..ಮೊದಲಿಗೆ ಓದಲು ಶುರು ಮಾಡುವವರಿಗೆ ಇದು ಉತ್ತಮ ಆಯ್ಕೆಯ ಪುಸ್ತಕವಾಗಿದೆ.

ಅಣ್ಣನ ನೆನಪು

ತಮ್ಮ ಬಾಲ್ಯದ ದಿನಗಳ ತುಂಟತನ ಹಾಗೂ ಕುವೆಂಪು ಅವರು ತಮ್ಮನ್ನು ಹಾಗೂ ತಮ್ಮನನ್ನು ನಿಭಾಯಿಸಿದ ರೀತಿಯನ್ನು ಅಣ್ಣನ ನೆನಪು ಪುಸ್ತಕ ಒಳಗೊಂಡಿದೆ. ಕೆಲವೊಂದು ಕತೆಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುವುದು ನಿಜ.