ಫೋಟೋ ಗ್ಯಾಲರಿ

ಸೆರಾಮಿಕ್​​, ಮಣ್ಣಿನ ಪಾತ್ರೆಗೂ ಇದೆ ಎಕ್ಸ್​ಪೈರಿ ಡೇಟ್​; ಒಡೆದಿದ್ರೂ ಬಳಕೆ ಮಾಡ್ತಿದ್ರೆ ಆರೋಗ್ಯ ಜೋಪಾನ..Health Tips

ಮನೆಗೆ ಆಗಮಿಸುವ ಅತಿಥಿಗಳಿಗಾಗಿ ಸಾಮಾನ್ಯವಾಗಿ ಭಾರತದ ಮಧ್ಯಮ ಹಾಗೂ ಬಡ ವರ್ಗದ ಕುಟುಂಬವು ಸೆರಾಮಿಕ್ ತಟ್ಟೆ ಹಾಗೂ ಗ್ಲಾಸ್, ಬಟ್ಟಲು ಬಳಕೆ ಮಾಡುತ್ತದೆ. ಮದುವೆ ನೋಡುವ ಶಾಸ್ತ್ರ, ಗೆಟ್​​ ಟು ಗೆದರ್​ ಸಮಯದಲ್ಲಿ ಮೂಲೆಯಲ್ಲಿರುವ ಇವು ಬೆಳಕಿಗೆ ಬರುತ್ತದೆ. ಬಳಕೆ ಮಾಡದೆ ಇಟ್ಟ ಈ ಸೆರಾಮಿಕ್​ ಕಪ್, ತಟ್ಟೆ ಮತ್ತು ಬಟ್ಟಲನ್ನು ವರ್ಷಾನುಗಟ್ಟಲೇ ಇಟ್ಟುಕೊಳ್ಳಬಹುದಾ?. ಇದಕ್ಕೂ ಎಕ್ಸಪೈರಿ ಡೇಟ್​ ಇರುತ್ತಾ. ಬಳಕೆಗೆ ಉತ್ತಮವಾಗಿದ್ದರೂ ಸಹ ಈ ಸೆರಾಮಿಕ್ ವಸ್ತುಗಳನ್ನು ಎಷ್ಟು ವರ್ಷಕ್ಕೊಮ್ಮೆ ಬದಲಾಯಿಸಬೇಕು ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ಸುದ್ದಿ ಜಾಲ

ಎಲ್ಲದಕ್ಕೂ ಇದೆ ಎಕ್ಸ್​ಪೈರಿ ಡೇಟ್

ಬಟ್ಟೆ, ಆಹಾರ, ಮೆಡಿಸಿನ್, ಬ್ಯಾಗ್​​ಗಳಿಗೆ ಇರುವಂತೆ ನಾವು ಬಳಕೆ ಮಾಡುವ ಸೆರಾಮಿಲ್​ ವಸ್ತು, ಪಿಂಗಾಣಿ, ಮಣ್ಣಿನ ಕಪ್​ಗಳಿಗೂ ಇವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಇವುಗಳ ಮೇಲೆ ದಿನಾಂಕ ಇರೋದಿಲ್ಲ ಹೌದು ಆದರೆ, ಸೀಮಿತ ಶೆಲ್ಫ್ ಜೀವಿತಾವಧಿಯನ್ನು ಹೊಂದಿರುತ್ತದೆ. ಅವಧಿ ಮೀರಿದ ನಂತರವೂ ವಸ್ತುಗಳ ಬಳಕೆ ಮಾಡುವುದು ದೇಹಕ್ಕೆ ಪರೋಕ್ಷವಾಗಿ ರಾಸಾಯನಿಕ ಸೇರಿಸಿದಂತೆ.

ಗ್ಲೇಜಿಂಗ್​​, ರಾಸಾಯನಿಕ ದೇಹಕ್ಕೆ

ಸಾಮಾನ್ಯವಾಗಿ ಮಣ್ಣಿನ ಪಾತ್ರೆ ಹಾಗೂ ಸೆರಾಮಿಕ್​ ತಯಾರಿಸುವಾಗ ಹೊಳಪಿಗಾಗಿ ವಿಷಕಾರಿ ರಾಸಾಯನಿಕ ಗ್ಲೇಜಿಂಗ್​ ಬಳಕೆ ಮಾಡಲಾಗುತ್ತದೆ. ಸೀಸ, ಕ್ಯಾಡ್ಮಿಯಂನಂತಹ ಲೋಹವನ್ನು ಹೊಂದಿರುತ್ತದೆ. ಸೆರಾಮಿಕ್​ ಹಾಗೂ ಮಣ್ಣಿನ ಪಾತ್ರೆ ಹಳೆಯದಾದಂತೆ ಅಥವಾ ಒಡೆದು ಹೋಗಿರುವ ವಸ್ತುವಿನಿಂದ ವಿಷಕಾರಿ ಅನಿಲ ನಿಮ್ಮ ದೇಹವನ್ನು ಪ್ರವೇಶಿಸುತ್ತದೆ.

ಬ್ಯಾಕ್ಟೀರಿಯಾ ದೇಹಕ್ಕೆ

ಕಪ್​ಗಳ ಒಳಭಾಗದಲ್ಲಿ ಅಥವಾ ಹೊರಭಾಗವೂ ಸೇರಿದಂತೆ ಸೀಳು ಬಿಟ್ಟಿದ್ದರೆ. ಸಣ್ಣ ಬಿರುಕಿನಲ್ಲಿ ಬ್ಯಾಕ್ಟೀರಿಯಾ ಶೇಖರಣೆಯಾಗುತ್ತದೆ. ನೀವು ನೀರು, ಬಿಸಿನೀರು ಹಾಕಿ ಹೇಗಾದರೂ ಸ್ವಚ್ಛಗೊಳಿಸಿದರೂ ಸಹ..ಕಾಲನಂತರದಲ್ಲಿ ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳು ಬೆಳೆದು ದೇಹ ಸೇರುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ, ಸೋಂಕು ಉತ್ಪತ್ತಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಸೀಸದಿಂದ ಆರೋಗ್ಯ ಸಮಸ್ಯೆ

ಸೆರಾಮಿಕ್​ನಿಂದ ತಯಾರಿಸುವ ಪ್ರತಿ ವಸ್ತುವಿಗೂ ಸೀಸ ಬಳಕೆ ಮಾಡಲಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಹೆವಿ ಮೆಟಲ್​. ಪಾತ್ರೆಯಲ್ಲಿಟ್ಟ ಆಹಾರ ಅಥವಾ ನಿಂಬೆ ರಸ, ಟೊಮ್ಯಾಟೋವು ಸೀಸದೊಂದಿಗೆ ಬೆರತು ದೇಹಕ್ಕೆ ಸೇರುತ್ತದೆ. ಇದು ಮೆದುಳಿನ ಮೇಲೆ ಹಾನಿ ಹಾಗೂ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ನೀವು ಸೆರಾಮಿಕ್ ಖರೀದಿ ಮಾಡುವಾ ಸೀಸ ಮುಕ್ತ ಅಥವಾ ಫುಡ್​ ಸೇವ್​ ಎಂದು ಮೆನ್ಷನ್​ ಆಗಿರುವ ವಸ್ತು ಖರೀದಿ ಮಾಡಿ.

ಮಗ್ ಯಾವಾಗ ಬದಲಾಯಿಸಬೇಕು?

ನೀವು ಬಳಕೆ ಮಾಡುವ ಸೆರಾಮಿಕ್ ಮಗ್​ ಅಥವಾ ಮಣ್ಣಿನ ವಸ್ತು ಬಿರುಕು ಕಂಡಾಗ ತಲಕ್ಷಣ ಅದನ್ನು ಬಿಸಾಡಲು ಮುಂದಾಗಿ. ಬಣ್ಣ ಮಸುಕಾಗಿದ್ದರೆ, ಗ್ಲಾಸ್ ಬಿರುಕು ಬಿಟ್ಟಿದ್ದರೆ ಬಿಸಾಡಿ. ನೀವು ಎಷ್ಟೇ ತೊಳೆದರೂ ಸಹ ಅದರೊಳಗೆ ಸಂಗ್ರಹವಾದ ಶಿಲೀಂಧ್ರವನ್ನು ತೊಲಗಿಸಲು ಸಾಧ್ಯವಾಗುವುದಿಲ್ಲ. ಹಳೆಯದಾದ ಪಿಂಗಾಣಿ ಕಪ್ ಸುಂದರವಾಗಿ ಕಂಡರು ಸಹ ಅದನ್ನು ಬಳಕೆ ಮಾಡುವುದು ಸರಿಯಲ್ಲ. ಹೀಗಾಗಿ ಬಿರುಕು, ಹಳೆಯದಾಗಿದೆ ಎಂದು ಕಂಡರೆ ಹೊಸ ವಸ್ತುಗಳನ್ನು ತಕ್ಷಣ ಖರೀದಿ ಮಾಡಿ, (ಏಜೆನ್ಸೀಸ್).