ಧನಶ್ರೀ ತುಂಬಾ ಹಾಟ್​ 
ಫೋಟೋ ಗ್ಯಾಲರಿ

ಯಜುವೇಂದ್ರ ಚಾಹಲ್​ ಮಾಜಿ ಪತ್ನಿಯ ಮಾದಕ ಫೋಟೋ ವೈರಲ್! Dhanashree Verma ​

ರಮೇಶ್​ ಕುಮಾರ್​​ ಬಿ ಎಡಮೋಳೆ

ಧನಶ್ರೀ ತುಂಬಾ ಹಾಟ್​

ಟೀಮ್​​ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಎಲ್ಲರಿಗೂ ಪರಿಚಿತ ಮುಖ. ಚಾಹಲ್​ ಅವರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಆಡಿದ್ದರಿಂದ ಧನಶ್ರೀ ವರ್ಮಾ ಕನ್ನಡಿಗರಿಗೂ ಪರಿಚಿತ.

ಸದಾ ಸುದ್ದಿಯಲ್ಲಿರುತ್ತಾರೆ

ಧನಶ್ರೀ ವರ್ಮಾ ಓರ್ವ ನೃತ್ಯ ಸಂಯೋಜಕಿ ಹಾಗೂ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್. ಮದುವೆಯಿಂದ ಹಿಡಿದು ವಿಚ್ಛೇದನಾವರೆಗೂ ಧನಶ್ರೀ ಸಖತ್​ ಸುದ್ದಿಯಾದರು.

ವೃತ್ತಿ ಜೀವನ

ಧನಶ್ರೀ ವರ್ಮಾ ಅವರು ವೃತ್ತಿಯಿಂದ ದಂತವೈದ್ಯರು. ಇವರು ನವಿ ಮುಂಬೈನ ಡಿ.ವೈ. ಪಾಟೀಲ್ ಕಾಲೇಜಿನಲ್ಲಿ ದಂತವೈದ್ಯಕೀಯ ಪದವಿ ಪಡೆದಿದ್ದಾರೆ.

ನೃತ್ಯದ ಮೇಲಿನ ಒಲವು

ಇವರು ಕೇವಲ ವೈದ್ಯರಷ್ಟೇ ಅಲ್ಲದೆ, ಪ್ರಸಿದ್ಧ ನೃತ್ಯ ಸಂಯೋಜಕಿ ಮತ್ತು ಯೂಟ್ಯೂಬರ್ ಕೂಡ ಹೌದು. ಇವರು ಪ್ರಖ್ಯಾತ ನೃತ್ಯ ನಿರ್ದೇಶಕ ಶಿಯಾಮಕ್ ದಾವರ್ ಅವರ ಬಳಿ ತರಬೇತಿ ಪಡೆದಿದ್ದಾರೆ.

ವೈಯಕ್ತಿಕ ಜೀವನ

ಧನಶ್ರೀ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯಜುವೇಂದ್ರ ಚಾಹಲ್ ಅವರನ್ನು 2020ರಲ್ಲಿ ವಿವಾಹವಾದರು. ಆದರೆ, ಇವರ ದಾಂಪತ್ಯ ಜೀವನ ಹೆಚ್ಚು ವರ್ಷ ನಡೆಯಲಿಲ್ಲ. ಇಬ್ಬರು ಡಿವೋರ್ಸ್​ ಪಡೆದುಕೊಂಡಿದ್ದಾರೆ.

ರಿಯಾಲಿಟಿ ಶೋ

ಧನಶ್ರೀ ಅವರು ಖ್ಯಾತ ನೃತ್ಯ ರಿಯಾಲಿಟಿ ಶೋ 'ಝಲಕ್ ದಿಖ್ಲಾ ಜಾ 11' (Jhalak Dikhhla Jaa 11) ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಫೈನಲಿಸ್ಟ್ ಆಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​

ಧನಶ್ರೀ ಅವರು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ತಮ್ಮ ನೃತ್ಯದ ವಿಡಿಯೋಗಳ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.

ಹಸಿರು ದಿರಿಸಿನಲ್ಲಿ ಕಂಗೊಳಿಸಿ ಧನಶ್ರೀ

ಧನಶ್ರೀ ವರ್ಮಾ ಅವರು ಹಸಿರು ದಿರಿಸಿನಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಮಾದಕ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್​ ಆಗಿದ್ದು, ಧನಶ್ರೀ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.