ಬಿಸಿಲಿಗೆ ಸೌತೆಕಾಯಿಯೇ ಸಂಜೀವಿನಿ 
ಫೋಟೋ ಗ್ಯಾಲರಿ

ಸೌತೆಕಾಯಿ ಕೇವಲ ಸಲಾಡ್ ಅಲ್ಲ, ಅದೊಂದು ಹೈಡ್ರೇಶನ್ ಬಾಂಬ್! Cucumber benifits

ಭಾನುಪ್ರಿಯ ಡಿ.ಕೆ

ಬಿಸಿಲಿಗೆ ಸೌತೆಕಾಯಿಯೇ ಸಂಜೀವಿನಿ

ಬೇಸಿಗೆಯ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಸಲು ಮತ್ತು ಆರೋಗ್ಯವಾಗಿಡಲು ಸೌತೆಕಾಯಿ ಒಂದು ವರದಾನವಿದ್ದಂತೆ. ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.

ದೇಹವನ್ನು ಹೈಡ್ರೇಟ್ ಆಗಿಡುತ್ತದೆ

ಬೇಸಿಗೆಯಲ್ಲಿ ಅತಿಯಾದ ಬೆವರಿನಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ . ಸೌತೆಕಾಯಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ನೀರು ಸರಬರಾಜಾಗಿ, ದೇಹ ತಂಪಾಗಿರುತ್ತದೆ.

ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ

ಹೊಟ್ಟೆಯ ಉರಿ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ. ಅಲ್ಲದೆ, ಸೌತೆಕಾಯಿಯ ಹೋಳುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಉರಿ ಮತ್ತು ಆಯಾಸ ಕಡಿಮೆಯಾಗುತ್ತದೆ

ಚರ್ಮದ ಆರೋಗ್ಯಕ್ಕೆ ಉತ್ತಮ

ಸೌತೆಕಾಯಿಯಲ್ಲಿರುವ 'ಸಿಲಿಕಾ' ಮತ್ತು 'ಪೊಟ್ಯಾಸಿಯಮ್' ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಇದು ಸನ್-ಬರ್ನ್ ಸಮಸ್ಯೆಯನ್ನು ನಿವಾರಿಸಲು ಮತ್ತು ಚರ್ಮವನ್ನು ಮೃದುವಾಗಿಡಲು ಸಹಾಯ ಮಾಡುತ್ತದೆ.

ತೂಕ ಇಳಿಸಲು ಸಹಕಾರಿ

ಸೌತೆಕಾಯಿತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಇದರಿಂದ ಅತಿಯಾಗಿ ಆಹಾರ ಸೇವಿಸುವುದು ತಪ್ಪುತ್ತದೆ. ಇದು ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅತ್ಯುತ್ತಮ ಸ್ನ್ಯಾಕ್ಸ್.

ಜೀರ್ಣಕ್ರಿಯೆ ಸುಧಾರಿಸುತ್ತದೆ

ಸೌತೆಕಾಯಿಯಲ್ಲಿರುವ ಕರಗುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.