ಹಾರುವ ಕಾರಿಗೆ ರೆಕ್ಕೆ ಕೊಟ್ಟ ಎಕ್ಸ್​ಪೆಂಗ್ ಸಂಸ್ಥೆ  
ಫೋಟೋ ಗ್ಯಾಲರಿ

‘ಮಸ್ಕ್’ ಟೆಸ್ಲಾಗೆ ಚೀನಾ ‘ಮಸ್ತ್’ ಪೈಪೋಟಿ

ಮೋಹನ್​ ಶೆಟ್ಟಿ

ಹಾರುವ ಕಾರಿಗೆ ರೆಕ್ಕೆ ಕೊಟ್ಟ ಎಕ್ಸ್​ಪೆಂಗ್ ಸಂಸ್ಥೆ

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ನೇತೃತ್ವದ ಟೆಸ್ಲಾ ಸಂಸ್ಥೆಗೆ ಸಖತ್ ಪೈಪೋಟಿ ಕೊಡಲು ಸನ್ನದ್ಧವಾಗಿರುವ ಚೀನಾ, ಇದೀಗ ತಮ್ಮದೇ ಎಕ್ಸ್​ಪೆಂಗ್​ ಸಂಸ್ಥೆಯಿಂದ ತಯಾರಾದ ಹಾರುವ ಕಾರುಗಳ ಟ್ರಯಲ್​ ಅನ್ನು ಯಶಸ್ವಿಯಾಗಿ ನಡೆಸಿದೆ.

ಅಮೆರಿಕದ ದೈತ್ಯ ಟೆಸ್ಲಾವನ್ನು ಹಿಂದಿಕ್ಕಿದ ಚೀನೀ ಕಂಪನಿ

ಟೆಸ್ಲಾಗೂ ಮುನ್ನವೇ ಅಖಾಡಕ್ಕಿಳಿದಿರುವುದು ಸದ್ಯ ಅಮೆರಿಕನ್ನರ ಹುಬ್ಬೇರಿಸಿದೆ. ಈ ವಾರ, ಚೀನಾ ಕಂಪನಿಯು ಹಾರುವ ಕಾರುಗಳ ಪ್ರಾಯೋಗಿಕ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಈ ಕಾರುಗಳನ್ನು ಹೊಸ ಪೀಳಿಗೆಯ ಸಾರಿಗೆಯಾಗಿ ಪ್ರಚಾರ ಮಾಡಲಾಗುತ್ತಿದೆ.

ಉತ್ಪಾದನೆ ಆರಂಭ

ಚೀನಾದ ಮಾಧ್ಯಮ ವರದಿಗಳ ಪ್ರಕಾರ, ಸುಮಾರು 120,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ಘಟಕವು ಭೂ ವಿಮಾನ ವಾಹಕ ಎಂದು ಕರೆಯಲ್ಪಡುವ ತನ್ನ ಮಾಡ್ಯುಲರ್ ಹಾರುವ ಕಾರಿನ ಮೊದಲ ಹಂತವನ್ನು ಈಗಾಗಲೇ ಪೂರ್ಣಗೊಳಿಸಿದೆ

ಆರಂಭಿಕ ಸಾಮರ್ಥ್ಯ 5,000 ಘಟಕಗಳು

ಈ ಸ್ಥಾವರವು ವಾರ್ಷಿಕವಾಗಿ 10,000 ಹಾರುವ ಕಾರು ಮಾಡ್ಯೂಲ್‌ಗಳನ್ನು ಉತ್ಪಾದಿಸಲು ಯೋಜಿಸಿದೆ. ಇದರ ಆರಂಭಿಕ ಸಾಮರ್ಥ್ಯ 5,000 ಘಟಕಗಳು ಎನ್ನಲಾಗಿದೆ.