ಉತ್ತಮ ನಿದ್ರೆ
ರಾತ್ರಿಯ ಉತ್ತಮ ನಿದ್ರೆಗೆ ಸರಿಯಾದ ಮಲಗುವ ಭಂಗಿಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಆಯುರ್ವೇದವು ಮಲಗುವ ಭಂಗಿಯನ್ನು ಬಹಳ ಮುಖ್ಯವೆಂದು ಪರಿಗಣಿಸುತ್ತದೆ. ಆದ್ದರಿಂದ, ಯಾವ ದಿಕ್ಕಿನ ನಿದ್ರೆ ದೇಹಕ್ಕೆ ಹೆಚ್ಚು ಆರಾಮವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಉತ್ತಮ ನಿದ್ರೆಗಾಗಿ ಕೆಲವು ಸರಳ ಟಿಪ್ಸ್!
ಮಲಗುವ 2-3 ಗಂಟೆ ಮೊದಲು ಆಹಾರ ಸೇವಿಸಿ.
ಹಾಸಿಗೆ ಸಮತಟ್ಟಾಗಿರಲಿ ಮತ್ತು ತುಂಬಾ ಎತ್ತರದ ದಿಂಬು ಬಳಸಬೇಡಿ.
ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳಿಂದ (ಮೊಬೈಲ್, ಟಿವಿ) ದೂರವಿರಿ.ಎಡಭಾಗದಲ್ಲಿ ಮಲಗುವುದರಿಂದ ಜೀರ್ಣಕ್ರಿಯೆ ಸುಧಾರಣೆ
ನಮ್ಮ ಹೊಟ್ಟೆಯು (Stomach) ಎಡಭಾಗದಲ್ಲಿರುತ್ತದೆ. ಎಡಕ್ಕೆ ತಿರುಗಿ ಮಲಗುವುದರಿಂದ ಗುರುತ್ವಾಕರ್ಷಣೆಯ ಬಲದಿಂದ ಆಹಾರದ ತ್ಯಾಜ್ಯವು ಸಣ್ಣ ಕರುಳಿನಿಂದ ದೊಡ್ಡ ಕರುಳಿನತ್ತ ಸುಲಭವಾಗಿ ಚಲಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.ಎಡಭಾಗದಲ್ಲಿ ಮಲಗುವುದರಿಂದ ಎದೆಯುರಿ ತಡೆಗಟ್ಟುವಿಕೆ!
ಎಡ ಮಗ್ಗುಲಿನಲ್ಲಿ ಮಲಗುವುದರಿಂದ ಹೊಟ್ಟೆಯಲ್ಲಿರುವ ಆಮ್ಲಗಳು ಅನ್ನನಾಳಕ್ಕೆ ವಾಪಸ್ ಬರುವುದಿಲ್ಲ. ಇದು ಆಸಿಡ್ ರಿಫ್ಲಕ್ಸ್ ಅಥವಾ ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಎಡಭಾಗದಲ್ಲಿ ಮಲಗುವುದರಿಂದ ಗೊರಕೆ ಕಡಿಮೆ ಮಾಡುತ್ತದೆ!
ಬೆನ್ನಿನ ಮೇಲೆ ಅಥವಾ ಬಲಕ್ಕೆ ಮಲಗುವುದಕ್ಕಿಂತ ಎಡಕ್ಕೆ ಮಲಗುವುದರಿಂದ ಉಸಿರಾಟದ ಹಾದಿ ಮುಕ್ತವಾಗಿರುತ್ತದೆ, ಇದು ಗೊರಕೆಯನ್ನು ತಗ್ಗಿಸಲು ನೆರವಾಗುತ್ತದೆ.ಬಲಬದಿಯಲ್ಲಿ ಮಲಗುವುದು ಯಾವಾಗ?
ನಿಮಗೆ ಯಾವುದಾದರೂ ತೀವ್ರತರದ ಹೃದಯದ ಕಾಯಿಲೆಗಳಿದ್ದರೆ, ವೈದ್ಯರು ಕೆಲವೊಮ್ಮೆ ಬಲಬದಿಯಲ್ಲಿ ಮಲಗಲು ಸಲಹೆ ನೀಡಬಹುದು. ಏಕೆಂದರೆ ಇದು ಎಡಭಾಗದಲ್ಲಿರುವ ಹೃದಯಕ್ಕೆ ಒತ್ತಡವಾಗದಂತೆ ನೋಡಿಕೊಳ್ಳುತ್ತದೆ.ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು?
ದಕ್ಷಿಣಕ್ಕೆ ತಲೆ ಮತ್ತು ಉತ್ತರಕ್ಕೆ ಕಾಲು ಹಾಕಿ ಮಲಗುವುದು ಭಾರತೀಯ ಸಂಪ್ರದಾಯ ಮತ್ತು ವಿಜ್ಞಾನದ ಪ್ರಕಾರ ಅತ್ಯಂತ ಶ್ರೇಷ್ಠ.
ಪೂರ್ವ ದಿಕ್ಕು ವಿದ್ಯಾರ್ಥಿಗಳು ಮತ್ತು ಏಕಾಗ್ರತೆ ಬಯಸುವವರಿಗೆ ಪೂರ್ವಕ್ಕೆ ತಲೆ ಇಡುವುದು ಒಳ್ಳೆಯದು.
ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ಮೆದುಳಿನ ಮೇಲೆ ಒತ್ತಡ ಉಂಟಾಗಿ ತಲೆನೋವು , ನಿದ್ರಾಹೀನತೆ ಉಂಟಾಗಬಹುದು.