ದುಪ್ಪಟ್ಟು ದುಃಖಕರ ಹಾಗೂ ಕಹಿ ಘಟನೆಗಳು ಸಂಭವಿಸಿವೆ
ದುಪ್ಪಟ್ಟು ದುಃಖಕರ ಹಾಗೂ ಕಹಿ ಘಟನೆಗಳು ಸಂಭವಿಸಿವೆ
2025 ಮುಗಿದು 2026ರ ಹೊಸ ವರ್ಷ, ಹೊಸ ಹರ್ಷಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಈಗಾಗಲೇ ಅನೇಕರು, ನ್ಯೂಇಯರ್ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಹಲವು ರೀತಿಯ ಪ್ಲ್ಯಾನ್ಗಳನ್ನು ಹಾಕಿಕೊಂಡಿದ್ದಾರೆ. ಇದು ಖುಷಿಯ ವಿಷಯವೇ ಇರಬಹುದು. ಆದರೆ, ಈ ವರ್ಷದಲ್ಲಿ ಸಿಹಿ ಕ್ಷಣಗಳು ಎಷ್ಟಿದೆಯೋ ಅದಕ್ಕಿಂತ ದುಪ್ಪಟ್ಟು ದುಃಖಕರ ಹಾಗೂ ಕಹಿ ಘಟನೆಗಳು ನಡೆದಿವೆ.ಪೊಟೊಮ್ಯಾಕ್ ನದಿಯ ಮಧ್ಯದಲ್ಲಿ ದುರಂತ
ಜನವರಿ 29ರಂದು ವಾಷಿಂಗ್ಟನ್‌ನ ಪೊಟೊಮ್ಯಾಕ್ ನದಿಯ ಮೇಲೆ ಅಮೇರಿಕನ್ ಏರ್‌ಲೈನ್ಸ್ ಫ್ಲೈಟ್ 5342 ಮತ್ತು ಯುಎಸ್ ಆರ್ಮಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಹಾರಾಟದಲ್ಲಿದ್ದ ವೇಳೆಯೇ ಡಿಕ್ಕಿಯಾಯಿತು. ಈ ದುರಂತದಲ್ಲಿ ಎರಡೂ ವಿಮಾನಗಳಲ್ಲಿದ್ದ 67 ಮಂದಿ ದುರ್ಮರಣ ಹೊಂದಿದರು. ಇದು ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ಯುಎಸ್ ವಾಯುಯಾನ ದುರಂತ ಎನ್ನಲಾಗಿದೆ.ಮೆಡ್ ಜೆಟ್ಸ್ ಫ್ಲೈಟ್ 056
ಕೇವಲ ಎರಡು ದಿನಗಳ ನಂತರ, ಜೆಟ್ ರೆಸ್ಕ್ಯೂ ಏರ್ ಆಂಬ್ಯುಲೆನ್ಸ್ ನಿರ್ವಹಿಸುವ ಮೆಡ್ ಜೆಟ್ಸ್ ಫ್ಲೈಟ್ 056 ಜ.31ರಂದು ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು. ಈ ದುರಂತದಲ್ಲಿ ಒಟ್ಟು 8 ಮಂದಿ ದಾರುಣ ಅಂತ್ಯ ಕಂಡರು.ಡೆಲ್ಟಾ ಕನೆಕ್ಷನ್ ಫ್ಲೈಟ್ 4819
ಫೆ.17ರಂದು ಡೆಲ್ಟಾ ಕನೆಕ್ಷನ್ ಫ್ಲೈಟ್ 4819 ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ವೇಳೆ ಪಲ್ಟಿಯಾಯಿತು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರೊಬ್ಬರು ಸಾವನ್ನಪ್ಪದಿದ್ದರೂ, ವಿಮಾನ ಉರುಳಿಬಿದ್ದ ಹಿನ್ನೆಲೆ ಕನಿಷ್ಠ 21 ಪ್ರಯಾಣಿಕರು ಮತ್ತು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರು.ಹಡ್ಸನ್ ನದಿಗೆ ಹೆಲಿಕಾಪ್ಟರ್ ಪತನ
ಏಪ್ರಿಲ್ 10ರಂದು ನ್ಯೂಯಾರ್ಕ್ನ ಹಡ್ಸನ್ ನದಿ ಸಮೀಪದ ಪರಿಸರ ವೀಕ್ಷಣೆಗೆಂದು ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಬೆಲ್ 206 ಲಾಂಗ್‌ರೇಂಜರ್ IV ಹೆಲಿಕಾಪ್ಟರ್ ಎರಡು ತುಂಡಾಗಿ ಪತನಗೊಂಡಿತು. ಈ ದುರಂತದಲ್ಲಿ ಕಾಪ್ಟರ್ನಲ್ಲಿದ್ದ ಎಲ್ಲರೂ ಸಾವಿಗೀಡಾದರು.ಏರ್ ಇಂಡಿಯಾ ಫ್ಲೈಟ್ 171
ಭಾರತದ ವಾಯುಯಾನ ಇತಿಹಾಸದಲ್ಲಿ ಅತ್ಯಂತ ಘೋರ ವಿಮಾನ ದುರಂತಗಳಲ್ಲಿ ಒಂದಾದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ 171 ಅಪಘಾತ ಇಂದಿಗೂ ಮರೆಯಲು ಸಾಧ್ಯವಿಲ್ಲ. 242 ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನ, ಜೂನ್ 12ರಂದು ಅಹಮದಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಸೆಕೆಂಡ್ಗಳಲ್ಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ಸ್ಪೋಟಗೊಂಡಿತು.ಅಂಗಾರಾ ಏರ್ಲೈನ್ಸ್ ಫ್ಲೈಟ್ 2311
ಜುಲೈ 24ರಂದು ರಷ್ಯಾದ ಅಮುರ್ ಪ್ರದೇಶದಲ್ಲಿ ಲ್ಯಾಡಿಂಗ್ ವೇಳೆ ಅಂಗಾರಾ ಏರ್ಲೈನ್ಸ್ ಫ್ಲೈಟ್ 2311 ದುರಂತಕ್ಕೆ ಸಾಕ್ಷಿಯಾಯಿತು. ಹವಾಮಾನ ವೈಪರೀತ್ಯದಿಂದ ಅಪಘಾತ ಸಂಭವಿಸಿತು ಎನ್ನಲಾಗಿದ್ದು, ವಿಮಾನದಲ್ಲಿದ್ದ ಒಟ್ಟು 48 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸಾವಿಗೀಡಾದರು.ಟರ್ಕಿಶ್ ವಾಯುಪಡೆಯ ಲಾಕ್‌ಹೀಡ್ ಸಿ-130
ನ.11ರಂದು ಮಿಲಿಟರಿ ಫ್ಲೈಟ್ ಅಪಘಾತಕ್ಕೆ ತುತ್ತಾಯಿತು. ಅಜೆರ್ಬೈಜಾನ್‌ನಿಂದ ಟರ್ಕಿಗೆ ಹಿಂತಿರುಗುತ್ತಿದ್ದ ಟರ್ಕಿಶ್ ವಾಯುಪಡೆಯ ಲಾಕ್‌ಹೀಡ್ ಸಿ-130 ಸರಕು ವಿಮಾನವು ಹಾರಾಟದ ವೇಳೆ ಎದುರಿಸಿದ ತಾಂತ್ರಿಕ ಸಮಸ್ಯೆಯಿಂದ ಜಾರ್ಜಿಯಾ ಪ್ರದೇಶದಲ್ಲಿ 3 ತುಂಡುಗಳಾಗಿ ಮುರಿದು ಬಿದ್ದಿತು. ಈ ದುರಂತದಲ್ಲಿ 20 ಮಂದಿ ಮೃತಪಟ್ಟರು.ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್ 803 ಇಂಜಿನ್ ಫೆಲ್ಯೂರ್
ಡಿ.13ರಂದು, ಯುನೈಟೆಡ್ ಏರ್‌ಲೈನ್ಸ್ ಫ್ಲೈಟ್ 803, ಬೋಯಿಂಗ್ 777, ಯುಎಸ್‌ನ ವಾಷಿಂಗ್ಟನ್ ಡಲ್ಲೆಸ್ ಅಂತಾರಾಷ್ಟ್ರೀಯ ಏರ್ಪೋರ್ಟ್ನಿಂದ ಟೇಕಾಫ್ ಆದ ಸ್ವಲ್ಪ ಸಮಯಕ್ಕೆ ಇಂಜಿನ್ ಫೆಲ್ಯೂರ್ ಸಮಸ್ಯೆಯನ್ನು ಅನುಭವಿಸಿತು. ತಕ್ಷಣವೇ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು. ಇದರಿಂದ ಫ್ಲೈಟ್ನಲ್ಲಿದ್ದ 275 ಪ್ರಯಾಣಿಕರು, ಸಿಬ್ಬಂದಿಗ