ಕೀವಿ ಹಣ್ಣು ಅತಿಯಾದ್ರೆ ಅಮೃತವೂ ವಿಷ! 
ಫೋಟೋ ಗ್ಯಾಲರಿ

ಕೀವಿ ಹಣ್ಣು ಸೇವನೆಯಿಂದ ಉಂಟಾಗುವ ಈ 6 ಅಪಾಯಗಳ ಬಗ್ಗೆ ಇರಲಿ ಎಚ್ಚರ! | Side Effects Of Kiwi

ಮಣಿಕಂಠ ಪಾ ಹಿರೇಮಠ

ಕೀವಿ ಹಣ್ಣು ಅತಿಯಾದ್ರೆ ಅಮೃತವೂ ವಿಷ!

ಕೀವಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿದೆ ನಿಜ. ಆದರೆ ಇದನ್ನು ಅತಿಯಾಗಿ ಸೇವಿಸುವುದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಅಲರ್ಜಿ ಸಮಸ್ಯೆ

ಕೆಲವರಿಗೆ ಕೀವಿ ಹಣ್ಣು ತಿಂದ ತಕ್ಷಣ ತುರಿಕೆ, ಊತ ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಇದನ್ನು 'ಕಿವಿ ಅಲರ್ಜಿ' ಎನ್ನಲಾಗುತ್ತದೆ.

ಬಾಯಿ ಮತ್ತು ಗಂಟಲಿನಲ್ಲಿ ಕಿರಿಕಿರಿ

ಕೀವಿ ಹಣ್ಣಿನಲ್ಲಿರುವ ಆಸಿಡ್ ಅಂಶದಿಂದಾಗಿ ಬಾಯಿ, ತುಟಿ ಮತ್ತು ಗಂಟಲಿನಲ್ಲಿ ಉರಿ ಅಥವಾ ಕುಟುಕಿದಂತಾಗುವ ಅನುಭವ ಉಂಟಾಗಬಹುದು.

ಜೀರ್ಣಕ್ರಿಯೆಯಲ್ಲಿ ಏರುಪೇರು

ಇದರಲ್ಲಿ ಫೈಬರ್ ಹೆಚ್ಚಿರುವುದರಿಂದ ಅತಿಯಾಗಿ ತಿಂದರೆ ಅತಿಸಾರ, ಹೊಟ್ಟೆ ಉಬ್ಬರ ಅಥವಾ ವಾಂತಿಯಂತಹ ಸಮಸ್ಯೆಗಳು ಕಾಡಬಹುದು.

ಕಿಡ್ನಿ ಹರಳು ಇರುವವರಿಗೆ ಅಪಾಯ

ಕೀವಿ ಹಣ್ಣಿನಲ್ಲಿ ಆಕ್ಸಲೇಟ್ ಅಂಶವಿರುತ್ತದೆ. ಇದು ಕಿಡ್ನಿಯಲ್ಲಿ ಕಲ್ಲು ಇರುವವರ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ರಕ್ತ ಹೆಪ್ಪುಗಟ್ಟುವಿಕೆಗೆ ಅಡ್ಡಿ?

ಒಂದು ವೇಳೆ ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದರೆ ಅಥವಾ ರಕ್ತಕ್ಕೆ ಸಂಬಂಧಿಸಿದ ಔಷಧಿ ತೆಗೆದುಕೊಳ್ಳುತ್ತಿದ್ದರೆ ಕೀವಿ ಹಣ್ಣಿನಿಂದ ದೂರವಿರುವುದು ಒಳಿತು.