ಹಾಲು
ವಾಸ್ತು ಪ್ರಕಾರ, ರಾತ್ರಿಯಲ್ಲಿ ಹಾಲನ್ನು ದಾನ ಮಾಡಬಾರದು. ಹಾಲು ಸೂರ್ಯ ಮತ್ತು ಚಂದ್ರನೊಂದಿಗೆ ಸಂಬಂಧ ಹೊಂದಿದ್ದು, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಹಾಗಾಗಿ ಸೂರ್ಯಾಸ್ತದ ನಂತರ ಹಾಲನ್ನು ದಾನ ಮಾಡುವುದು ನಿಮ್ಮ ಜೀವನದಲ್ಲಿ ಆರ್ಥಿಕ ತೊಂದರೆ ಉಂಟು ಮಾಡುತ್ತವೆ.ಮೊಸರು
ಹಿಂದೂ ಸಂಪ್ರದಾಯದ ಪ್ರಕಾರ, ಮೊಸರು ಶುಕ್ರ ಗ್ರಹದ ಅಂಶವಾಗಿ, ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಸೂರ್ಯಾಸ್ತದ ನಂತರ ದಾನ ಮಾಡುವುದರಿಂದ ಇದು ಮನೆಯಲ್ಲಿ ನಕರಾತ್ಮಕ ಶಕ್ತಿಯನ್ನು ಬೀರುತ್ತದೆ.ಉಪ್ಪು
ರಾತ್ರಿಯ ವೇಳೆ ಉಪ್ಪು ದಾನ ಮಾಡುವುದರಿಂದ ಮನೆಗೆ ನಕರಾತ್ಮಕ ಶಕ್ತಿ ಹೆಚ್ಚಾಗಿ ಮನೆಯಲ್ಲಿ ದುಃಖ, ಒತ್ತಡ, ಗಲಭೆ, ವಾದ-ವಿವಾದಗಳು ಉಂಟಾಗಿ ಸಮಸ್ಯೆಗಳನ್ನು ಉಂಟುಮಾಡುತ್ತವೆ