ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ 
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ವಾಲ್ನಟ್ಸ್ ತಿನ್ನುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? walnut

ಭಾನುಪ್ರಿಯ ಡಿ.ಕೆ

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಚಳಿಗಾಲದಲ್ಲಿ ಶೀತ, ಕೆಮ್ಮು, ಜ್ವರ ಸಾಮಾನ್ಯ. ವಾಲ್ನಟ್ಸ್‌ನಲ್ಲಿರುವ ಜಿಂಕ್, ವಿಟಮಿನ್ E ಮತ್ತು ಆಂಟಿ ಆಕ್ಸಿಡೆಂಟ್‌ಗಳು ರೋಗನಿರೋಧಕ ಕೋಶಗಳನ್ನು ಬಲಪಡಿಸಿ ಸೋಂಕುಗಳಿಂದ ರಕ್ಷಣೆ ನೀಡುತ್ತವೆ.

ದೇಹಕ್ಕೆ ಬೆಚ್ಚಗಿನ ಶಕ್ತಿ ನೀಡುತ್ತದೆ

ಆರೋಗ್ಯಕರ ಫ್ಯಾಟ್‌ಗಳು ದೇಹದ ಉಷ್ಣತೆಯನ್ನು ನಿರ್ವಹಿಸಿ ಚಳಿಯನ್ನು ತಡೆಯುತ್ತವೆ. ಇದು ಚಳಿಗಾಲದಲ್ಲಿ ಆಯಾಸವನ್ನು ಕಡಿಮೆ ಮಾಡುತ್ತದೆ.

ಹೃದಯ ಆರೋಗ್ಯ ಸುಧಾರಿಸುತ್ತದೆ

ಒಮೆಗಾ-3 ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಫ್ಯಾಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತವೆ. ಇದು ಚಳಿಯಲ್ಲಿ ಹೃದಯವನ್ನು ಬೆಚ್ಚಗಿರಿಸುತ್ತದೆ.

ಚರ್ಮದ ಆರೋಗ್ಯ ಕಾಪಾಡುತ್ತದೆ

ಚಳಿಗಾಲದಲ್ಲಿ ಚರ್ಮ ಒಣಗಿ, ಒಡಕು ಉಂಟಾಗುತ್ತದೆ. ವಿಟಮಿನ್ E ಮತ್ತು ಆಂಟೀಆಕ್ಸಿಡೆಂಟ್‌ಗಳು ಚರ್ಮವನ್ನು ತೇವಾಂಶಯುಕ್ತವಾಗಿ ಇರಿಸಿ ಉರಿಯೂತ ಕಡಿಮೆ ಮಾಡುತ್ತವೆ.

ಮೆದುಳಿನ ಆರೋಗ್ಯ ಸುಧಾರಿಸುತ್ತದೆ

ಒಮೆಗಾ-3 ಫ್ಯಾಟಿ ಆಸಿಡ್‌ಗಳು ಮಿದುಳಿನ ಕಾರ್ಯವನ್ನು ಬೆಂಬಲಿಸಿ ಚಳಿಗಾಲದ ಡಿಪ್ರೆಷನ್​ ಕಡಿಮೆ ಮಾಡುತ್ತದೆ. ಜೊತೆಗೆ ಸ್ಮರಣೆ ಮತ್ತು ಏಕಾಗ್ರತೆ ಹೆಚ್ಚಿಸುತ್ತದೆ.

ತೂಕ ನಿಯಂತ್ರಣ ಮತ್ತು ಉರಿಯೂತ ಕಡಿಮೆ

ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್‌ಗಳು ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ. ಜೊತೆಗೆ ಸಂಧಿ ನೋವುಗಳನ್ನು ಕಡಿಮೆ ಮಾಡುತ್ತದೆ.