ಈ ಹಣ್ಣಿನ ಸೇವನೆ ಹೃದಯ ಆರೋಗ್ಯಕ್ಕೆ ಬೆಸ್ಟ್
ಈ ಹಣ್ಣಿನ ಸೇವನೆ ಹೃದಯ ಆರೋಗ್ಯಕ್ಕೆ ಬೆಸ್ಟ್
ಅಷ್ಟಕ್ಕೂ, ರಾಸ್ಬೆರಿಸ್ನಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಇ, ಆಂಥೋಸಯಾನಿನ್ ಮತ್ತು ಎಲಾಜಿಕ್ ಆಮ್ಲ ಇರುತ್ತವೆ. ಇವು ಫ್ರೀ ರಾಡಿಕಲ್ ಹಾನಿಯನ್ನು ತಡೆಯಲು ಸಹಕಾರಿ. ಇದಲ್ಲದೆ, ಈ ಹಣ್ಣು ಫೈಬರ್‌ನಲ್ಲಿ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ.ತೂಕ ಇಳಿಕೆ, ಹೃದಯದ ಆರೋಗ್ಯ
ತೂಕ ಇಳಿಸಿಕೊಳ್ಳಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಇಚ್ಛಿಸುವವರಿಗೆ ಈ ಹಣ್ಣು ತುಂಬಾ ಉಪಯುಕ್ತ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದು ಪೊಟ್ಯಾಸಿಯಮ್ ಸೇರಿ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಳ
ಹೆಚ್ಚಿನ ಮಟ್ಟದ ಆಂಥೋಸಯಾನಿನ್‌ಗಳು, ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಇರುವುದರಿಂದ, ಅವು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.ಕ್ಯಾನ್ಸರ್ ಕಾಯಿಲೆ ನಿಯಂತ್ರಣ
ರಾಸ್ಬೆರಿಸ್ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳನ್ನೂ ನಿಯಂತ್ರಣಗೊಳಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅವುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ. ಚರ್ಮದ ಮೇಲಿನ ಸುಕ್ಕುಗಳು ಮತ್ತು ಕಲೆಗಳನ್ನು ಹೋಗಲಾಡಿಸುವಲ್ಲಿ ರಾಸ್ಬೆರಿಸ್ ಉತ್ತಮ.