ಆರೋಗ್ಯ ಕಣಜ  
ಫೋಟೋ ಗ್ಯಾಲರಿ

ಒಣದ್ರಾಕ್ಷಿಗಳಿಂದ ಇಷ್ಟೊಂದು ಪ್ರಯೋಜನವಿದೆಯಾ? Raisins

ರಮೇಶ್​ ಕುಮಾರ್​​ ಬಿ ಎಡಮೋಳೆ

ಆರೋಗ್ಯ ಕಣಜ

ನಿಯಮಿತವಾಗಿ ಒಣದ್ರಾಕ್ಷಿ ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದನ್ನು ಆರೋಗ್ಯ ಕಣಜ ಅಂತಾನೇ ಕರೆಯುತ್ತಾರೆ. ಏನೆಲ್ಲ ಲಾಭವಿದೆ ಎಂಬುದನ್ನು ತಿಳಿಯೋಣ.

ಚರ್ಮದ ಹೊಳಪು

ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹೊಳಪುಗೊಳಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ

ಪೊಟ್ಯಾಸಿಯಮ್ ಸಮೃದ್ಧವಾಗಿರುವುದರಿಂದ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆ

ಒಣದ್ರಾಕ್ಷಿಗಳು ಹೈ ಫೈಬರ್ ಮತ್ತು ಕಡಿಮೆ ಕೊಬ್ಬು ಹೊಂದಿರುವುದರಿಂದ ಭೋಜನದ ನಂತರ ಹಸಿವನ್ನು ಕಡಿಮೆ ಮಾಡಿ, ತೂಕ ಇಳಿಕೆಗೆ ಸಹಾಯ ಮಾಡುತ್ತವೆ.

ಮೂಳೆಗಳ ಬಲ

ಕ್ಯಾಲ್ಸಿಯಂ ಮತ್ತು ಬೋರಾನ್​ನಂತಹ ಖನಿಜಗಳು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಹಿಮೋಗ್ಲೋಬಿನ್ ಹೆಚ್ಚಳ

ಒಣದ್ರಾಕ್ಷಿಗಳು ಕಬ್ಬಿಣ, ತಾಮ್ರ ಮತ್ತು ವಿಟಮಿನ್ ಬಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಪ್ರತಿರಕ್ಷಣಾ ವ್ಯವಸ್ಯೆ

ಒಣದ್ರಾಕ್ಷಿಗಳಲ್ಲಿ ಇರುವ ಫೀನಾಲಿಕ್ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳು ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ.

ಮಲಬದ್ಧತೆ

ಒಣದ್ರಾಕ್ಷಿಗಳು ನಾರಿನಂಶದಲ್ಲಿ ಅಧಿಕವಾಗಿವೆ. ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಏಕಾಗ್ರತೆ

ನೈಸರ್ಗಿಕ ಸಕ್ಕರೆಗಳ (ಗ್ಲೂಕೋಸ್, ಫ್ರಕ್ಟೋಸ್) ಶಕ್ತಿಯನ್ನು ಒದಗಿಸುತ್ತದೆ ಮತ್ತು ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ನೆನೆಸಿ ಸೇವಿಸಿ

ಒಣದ್ರಾಕ್ಷಿಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿ, ನೀರನ್ನು ಕುಡಿಯುವುದು ಮತ್ತು ಬೆಳಗ್ಗೆ ಒಣದ್ರಾಕ್ಷಿ ತಿನ್ನುವುದು ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ಗಮನಿಸಿ

ಮಧುಮೇಹ ಇರುವವರು ಯಾವುದೇ ಕಾರಣಕ್ಕೂ ಒಣದ್ರಾಕ್ಷಿಗಳನ್ನು ಹೆಚ್ಚು ತಿನ್ನಬಾರದು. ಕಡಿಮೆ ಸೇವಿಸಿದರೆ ಒಳ್ಳೆಯದು.