"ಅರುಣಾಚಲೇಶ್ವರ" ನ ದರ್ಶನ ಪಡೆದ ನಟಿ ಅನುಷಾ ರೈ! Anusha Rai
Anusha Rai: ಕನ್ನಡ ಬಿಗ್ಬಾಸ್ ಸೀಸನ್ 11 ರ ಸ್ಪರ್ಧಿ ಹಾಗೂ 'ರೈಡರ್','ಖಡಕ್' ಸಿನಿಮಾಗಳ ಮೂಲಕ ಪರಿಚಿತರಾಗಿರುವ ನಟಿ ಅನುಷಾ ರೈ ಇತ್ತೀಚೆಗೆ ತಮಿಳುನಾಡಿನ ತಿರುವಣ್ಣಮಲೈಗೆ ಬೇಟಿ ನೀಡಿದ್ದಾರೆ. ಅಲ್ಲಿರುವ ಖ್ಯಾತ ಅರುಣಾಚಲೇಶ್ವರನ ದರ್ಶನವನ್ನು ಪಡೆದಿರುವ ನಟಿ, ಅಲ್ಲಿಯ ಕೆಲ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ಅವರ ಅಭಿಮಾನಿಗಳಿಂದ ಸಕಾರಾತ್ಮಕ ಕಮೆಂಟ್ಗಳು ಹರಿದು ಬಂದಿದೆ.