ಕನ್ನಡಿಗರಿಗೆ ಪರಿಚಯ 
ಫೋಟೋ ಗ್ಯಾಲರಿ

ಅನುಪಮಾ ಅಂದಕ್ಕೆ ಅಭಿಮಾನಿಗಳು ಫಿದಾ! Anupama Parameswaran

ರಮೇಶ್​ ಕುಮಾರ್​​ ಬಿ ಎಡಮೋಳೆ

ಕನ್ನಡಿಗರಿಗೆ ಪರಿಚಯ

ನಟಿ ಅನುಪಮಾ ಪರಮೇಶ್ವರನ್​ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ದಿವಂಗತ ನಟ ಪುನೀತ್​ರಾಜ್​ಕುಮಾರ್​ ಅವರಿಗೆ ನಟ ಸಾರ್ವಭೌಮ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿ ಕನ್ನಡಿಗರಿಗೆ ಪರಿಚಯವಾಗಿದ್ದಾರೆ.

ಗುಂಗುರು ಕೂದಲೇ ಆಕರ್ಷಣೆ

ಅನುಪಮಾ ಸೌಂದರ್ಯಕ್ಕೆ ಎಷ್ಟು ಅಭಿಮಾನಿಗಳಿದ್ದಾರೋ ಅವರ ಗುಂಗುರು ಕೂದಲಿಗೂ ಅಷ್ಟೇ ಅಭಿಮಾನಿಗಳಿದ್ದಾರೆ. ಅವರು ಯಾವುದೇ ಫೋಟೋ ಹಂಚಿಕೊಂಡರೂ ಅವರ ತಲೆಕೂದಲಿನ ಬಗ್ಗೆ ಒಂದಿಷ್ಟು ಮಂದಿ ಕಾಮೆಂಟ್​ ಮಾಡುತ್ತಾರೆ.

ಅಂದ ಹೆಚ್ಚಿಸಿದ ಗುಂಗುರು ಕೂದಲು

ದಕ್ಷಿಣದ ಭಾರತ ಚಿತ್ರರಂಗದ ಬಹಳಷ್ಟು ನಟಿಯರಿಗೆ ಸುಂದರವಾದ ಗುಂಗುರು ಕೂದಲು ಇದೆ, ನಿತ್ಯಾ ಮೆನನ್, ತಾಪ್ಸಿ ಮತ್ತು ಇನ್ನೂ ಅನೇಕರು ಕರ್ಲಿ ಹೇರ್​ ಹೊಂದಿದ್ದಾರೆ. ಆದರೆ, ಅನುಪಮಾ ಪರಮೇಶ್ವರನ್ ಅವರಿಗಿರುವ ಗುಂಗುರು ಕೂದಲು ತುಂಬಾ ವಿಭಿನ್ನವಾಗಿದೆ.

ಅಭಿಮಾನಿಗಳು ಫಿದಾ

ಅನುಪಮಾ ಅವರ ಮುಖಕ್ಕೆ ಗುಂಗುರು ಕೂದಲು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದೀಗ ಮತ್ತೊಮ್ಮೆ, ತಮ್ಮ ಗುಂಗುರು ಕೂದಲಿನಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನುಪಮಾರ ಫೋಟೋ ನೋಡಿದ ಕೂಡಲೇ ಫಿದಾ ಆಗಿರುವ ಅಭಿಮಾನಿಗಳು ಗುಂಗುರು ಕೂದಲು ನಿಮಗೆ ಹೋಲುವ ರೀತಿ ಯಾರಿಗೂ ಹೋಲಲ್ಲ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಮಾದಕ ನಗು

ಹೊಸ ಫೋಟೋಗಳಲ್ಲಿ ಗಾಢ ಗುಲಾಬಿ ಬಣ್ಣದ ಸೀರೆಯನ್ನು ಸ್ಲೀವ್​ಲೆಸ್​ ಬ್ಲೌಸ್‌ನೊಂದಿಗೆ ಅನುಪಮಾ ಧರಿಸಿದ್ದಾರೆ. ಪ್ರತಿ ಫೋಟೋದಲ್ಲೂ ನಗು ನಗುತ್ತಾ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಮುಂದಿನ ಸಿನಿಮಾಗಳು

ತಮಿಳಿನಲ್ಲಿ ಲಾಕ್‌ಡೌನ್, ಮಲಯಾಳಂನಲ್ಲಿ ಕೋರ್ಟ್‌ರೂಮ್ ಥ್ರಿಲ್ಲರ್ ಜೆಎಸ್‌ಕೆ: ಟ್ರೂತ್ ಶಾಲ್ ಅಲ್ವೇಸ್ ಪ್ರೆವೈಲ್, ರೊಮಾಂಟಿಕ್ ಕಾಮೆಡಿ ದಿ ಪೆಟ್ ಡಿಟೆಕ್ಟಿವ್, ತೆಲುಗಿನಲ್ಲಿ ಬಟರ್‌ಫ್ಲೈ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.